ನವದೆಹಲಿ: ವಾಟ್ಸಪ್ ಬಹುಪಯೋಗಿ ಆ್ಯಪ್ ಆಗಿ ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಿ ಹೋಗಿದೆ. ಆದರೀಗ ಬಳಕೆದಾರರಿಗೆ ಈ ಸಂಸ್ಥೆ ಶಾಕ್ ನೀಡಿದ್ದು, ಹಳೆ ಮಾದರಿಯ ಆಪರೇಟಿಂಗ್ ಸಿಸ್ಟಂ ಇರುವ ಮೊಬೈಲ್‌ಗಳಿಗೆ ಸೇವೆ ನೀಡುವುದಿಲ್ಲ ಎಂದು ಹೇಳಿದೆ.
2021ರ ಜನವರಿ 1 ರಿಂದ ಹಳೆ ಮಾದರಿಯ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಇರುವ ಆ್ಯಪಲ್ ಫೋನ್‌ಗಳಿಗೆ ವಾಟ್ಸಪ್ ಸೇವೆ ಲಭ್ಯ ಇರುವುದಿಲ್ಲ ಎಂದು ವಾಟ್ಸಪ್ ಸಂಸ್ಥೆ ಸ್ಪಷ್ಟಪಡಿಸಿದೆ.
ವಾಟ್ಸಪ್‌ನ ಎಫ್‌ಎಕ್ಯೂ ವಿಭಾಗದ ಪ್ರಕಾರ, ಆ್ಯಂಡ್ರಾಯ್ಡ್ 4.0.3 ಒಎಸ್ ಮತ್ತು ಐಫೋನ್‌ನ ಐಒಎಸ್ 9 ಮತ್ತು ಹೊಸದಾಗಿ ಬಂದಿರುವ ಫೋನ್‌ಗಳಲ್ಲಿ ಮಾತ್ರ ವಾಟ್ಸಪ್ ಸೇವೆ ನೀಡುವುದಾಗಿ ಹೇಳಿದೆ.
ಓದಿ: 'ಲಾವಾ' ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ ಲಾಂಚ್.. ಇಷ್ಟೊಂದು ಕಡಿಮೆ ದರಕ್ಕೆ ಸಿಗುವುದು ಕನಸಿನ ಮಾತು!
ಐಫೋನ್ 4 ಹಾಗೂ ಅದಕ್ಕಿಂತ ಹಿಂದಿನ ಮಾದರಿಯ ಫೋನ್‌ಗಳು ಮುಂದಿನ ಕೆಲ ದಿನಗಳಲ್ಲಿ ಮೆಸೇಜಿಂಗ್ ಫ್ಲಾಟ್‌ಫಾರ್ಮ್ ಅನ್ನು ಕಳೆದುಕೊಳ್ಳಲಿವೆ. ಐಫೋನ್ 4ಎಸ್, ಐಫೋನ್5, ಐಫೋನ್ 5ಎಸ್, ಐಫೋನ್ 6, ಐಫೋನ್ 6ಎಸ್ ಇದರಲ್ಲಿ ಸೇರಿವೆ.
ಓದಿ: ಏರ್ ಇಂಡಿಯಾ ಖಾಸಗೀಕರಣದ 2ನೇ ಹಂತ ಶುರು: ಅರ್ಹ ಬಿಡ್ದಾರರ ಹೆಸರು ಜ.5ಕ್ಕೆ ಬಹಿರಂಗ
ಆ್ಯಂಡ್ರಾಯ್ಡ್‌ನಲ್ಲಿ ಹೆಚ್‌ಟಿಸಿ ಡಿಸೈರ್, ಮೊಟೊರೊಲಾ ಡ್ರಾಯಿಡ್ ರೇಜರ್, ಎಲ್‌ಜಿ ಆಫ್ಟಿಮಸ್ ಬ್ಲಾಕ್, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್2 ಫೋನ್‌ಗಳಲ್ಲಿ 2020ರ ಅಂತ್ಯಕ್ಕೆ ವಾಟ್ಸಪ್ ಸಪೋರ್ಟ್ ಕಳೆದುಕೊಳ್ಳಲಿವೆ.
ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ವಾಟ್ಸಪ್ ಸೇವೆ ಮುಂದುವರಿಯುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು ಮೊಬೈಲ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಯಾವ ಒಎಸ್ ರನ್ ಆಗುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಿದೆ. ಅಥವಾ ಯಾವ ಆವೃತ್ತಿಯ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕಿದೆ.