ನವದೆಹಲಿ : ಕಾಪಿ ರೈಟ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೊಲೊ ಇಂಡಿಯಾ, ಮಿಟ್ರಾನ್, ಎಂಎಕ್ಸ್ ಪ್ಲೆಯರ್, ತಕಾತಕ್, ಟ್ರಿಲ್ಲರ್ ಮತ್ತು ಜೋಶ್ ಸೇರಿ ಅನೇಕ ಸಾಮಾಜಿಕ ವಿಡಿಯೋ ಪ್ಲಾಟ್‌ಫಾರ್ಮ್‌ಗಳಿಗೆ ಪ್ರಸಿದ್ಧ ಮ್ಯೂಸಿಕ್ ಕಂಪನಿ ಟಿ-ಸೀರೀಸ್ ಲೀಗಲ್ ನೋಟಿಸ್ ನೀಡಿದೆ ಮತ್ತು ಕಂಪನಿಯ ಉತ್ಪನ್ನಗಳನ್ನು ಬಳಸಿಕೊಳ್ಳದಂತೆ ಎಚ್ಚರಿಸಿದೆ.
ಕಂಪನಿಯ ಹಾಡು, ಮ್ಯೂಸಿಕ್ಗಳನ್ನು ಅನಧಿಕೃತವಾಗಿ ಬಳಸಿಕೊಂಡಿದ್ದಕ್ಕಾಗಿ ಟಿ-ಸೀರೀಸ್ ಎಂಬ ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮೇಲಿನ ಎಲ್ಲಾ ಕಿರು ವಿಡಿಯೋ ಪ್ಲಾಟ್‌ಫಾರ್ಮ್‌ಗಳಿಗೆ ಸುಮಾರು 3.5 ಕೋಟಿ ರೂ. ದಂಡ ಕಟ್ಟುವಂತೆ ತಿಳಿಸಿದೆ.
ಅದೇ ರೀತಿ ಚೈನೀಸ್ ಆ್ಯಫ್ ಸ್ನ್ಯಾಕ್ ವಿಡಿಯೋ ಮತ್ತು ಬೆಂಗಳೂರು ಮೂಲದ ರೊಪೊಸ್ಕೋ ವಿರುದ್ಧವೂ ಮೊಕದ್ದಮ್ಮೆ ಹೂಡಿದೆ. ಕಿರು ವಿಡಿಯೋ ಆ್ಯಪ್ಗಳ ವಿರುದ್ಧ ಲೀಗಲ್ ನೋಟಿಸ್ ಕಳಿಸಿರುವ ಬಗ್ಗೆ ಟಿ-ಸೀರೀಸ್ ಕಾನೂನು ಪಾಲುದಾರ ಗೀತಾಂಜಲಿ ವಸಂತ್ ದೃಢಪಡಿಸಿದ್ದಾರೆ. ರೊಪೊಸ್ಕೋ ವಿರುದ್ಧದ ಮೊಕದ್ದಮೆಯ ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ.