ETV Bharat / lifestyle

ವರ್ಕ್‌ ಫ್ರಮ್​ ಹೋಮ್​ನ‌ ಪಾಸ್‌ವರ್ಡ್‌, ದಾಖಲೆ ಸುರಕ್ಷತೆಗೆ ಆ್ಯಪ್​ ಶೋಧನೆ‌ - ಹೊಸ ಆ್ಯಪ್‌

ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕೆಲಸ- ಕಾರ್ಯಗಳನ್ನು ಮುಂದುವರೆಸುವ ಅವಶ್ಯಕತೆ ಇರುವುದನ್ನು ಮನಗಂಡ ಭಾರತೀಯ ಡೆವಲಪರ್ಸ್,‌ ವಿಶ್ವದರ್ಜೆಯ ಐಒಎಸ್ ‌ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

indian-developers-create-next-gen-ios-apps-for-remote-working
ವರ್ಕ್‌ ಫ್ರಂ ಹೋಮ್‌ ಪಾಸ್‌ವರ್ಡ್‌, ದಾಖಲೆ ಸುರಕ್ಷತೆಗಾಗಿ ನೆಕ್ಸ್ಟ್‌ ಜೆನ್‌ ಐಒಎಸ್‌ ಆ್ಯಪ್ಸ್‌
author img

By

Published : May 25, 2020, 7:44 PM IST

ನವದೆಹಲಿ: ಕೋವಿಡ್‌-19ನಿಂದ ಪಾರಾಗಬೇಕಾದ್ರೆ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್​ನಿಂದ ಆಗಾಗ ಕೈತೊಳೆಯುವುದು‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಮುಂದುದಿರುವ ಮಾರ್ಗಗಳು.

ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕೆಲಸ- ಕಾರ್ಯಗಳನ್ನು ಮುಂದುವರೆಸುವ ಅವಶ್ಯಕತೆ ಇರುವುದನ್ನು ಮನಗಂಡ ಭಾರತೀಯ ಡೆವಲಪರ್ಸ್,‌ ವಿಶ್ವದರ್ಜೆಯ ಐಒಎಸ್ ‌ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಅತ್ಯಾಧುನಿಕ ಐಒಎಸ್‌ ಹೇಗೆ ಕೆಲಸ ಮಾಡಲಿದೆ ಎಂಬುದನ್ನ ಡೆವಲಪರ್ಸ್‌ಗಳಾದ ವಿನೋದ್‌ ಕುಮಾರ್‌ ಮತ್ತು ಹೇಮಂತ್‌ ಕುಮಾರ್‌ 'ಎನ್‌ಪಾಸ್‌ ಪಾರ್‌ವರ್ಡ್‌ ಮ್ಯಾನೇಜರ್‌' ಅನ್ನು ಉದಾಹರಣೆ ಮೂಲಕ ವಿವರಿಸಿದ್ದಾರೆ. ಎನ್‌ಪಾಸ್‌ ಎಂಬುದು ಆಫ್‌ಲೈನ್‌ ಪಾಸ್‌ವರ್ಡ್‌ ಮ್ಯಾನೇಜರ್.‌ ಇದು ಬಳಕೆದಾರರ ಪಾಸ್‌ವರ್ಡ್‌ ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುತ್ತದೆ. ಇದು ಮ್ಯಾಕ್‌, ಐಫೋನ್‌, ವಾಚ್‌ ಮತ್ತು ಐಪ್ಯಾಡ್‌ಗಳಿಗೆ ನೆರವಾಗಲಿದೆ.

ಕ್ಯಾಲುಕುಲೇಟರ್‌ಗಾಗಿ 'ಕ್ರೇಜಿ' ಎಂಬ ಮತ್ತೊಂದು ಆ್ಯಪ್‌ ಇದೆ. ಇದು ಪ್ರತಿನಿತ್ಯದ ಚಟುವಟಿಕೆಗಳಿಗಾಗಿ ಬಳಕೆ ಮಾಡಿಕೊಳ್ಳಬಹುದು.

ಸೂಪರ್ ಸ್ಟಾರ್‌ ರಜನಿಕಾಂತ್‌ ನಟನೆಯ ರೊಬೊಟ್‌ ಸಿನಿಮಾಗೆ ವಿಎಫ್‌ಎಕ್ಸ್‌ ಕೆಲಸ ಮಾಡಿದ್ದ ಚೆನ್ನೈ ಮೂಲದ ವಿಜಯರಾಮನ್‌ ಶಿಫ್ಟ್‌ ಎಂಬುವವರು ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ತುಂಬಾ ಸೊಗಸಾದ ರೀತಿಯಲ್ಲಿ ದೈನಂದಿನ ಗಣಿತದ ಲೆಕ್ಕಗಳನ್ನು ಕ್ಯಾಲುಕುಲೇಟ್‌ ಮಾಡಲು ಇದು ಸಹಕಾರಿಯಾಗಿದೆ.

ವಿಜಯರಾಮನ್‌ ಸಂಪೂರ್ಣವಾಗಿ ಆ್ಯಪ್‌ ಅಭಿವೃದ್ಧಿ ಪಡಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2018ರ ಆ್ಯಪಲ್‌ ವರ್ಲ್ಡ್‌ವೈಡ್‌ ಡೆವೆಲಪರ್ಸ್‌ ಸಮ್ಮೇಳನದಲ್ಲಿ ಆ್ಯಪಲ್‌ ಡಿಸೈನ್‌ ಅವಾರ್ಡ್‌ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಡಿಕ್ಷನರಿಗಾಗಿ 'ಲೂಕ್‌ಅಪ್‌' ಸೇರಿದಂತೆ ವಿವಿಧ ಬಗೆಯ ಆ್ಯಪ್‌ಗಳು ಮನೆಯಿಂದಲೇ ಕೆಲಸ ಮಾಡಿಸುವ ಕಂಪನಿಗಳು ಹಾಗೂ ಉದ್ಯೋಗಿಗಳಿಗೆ ನೆರವಾಗಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.