ನವದಹೆಲಿ : ಮೆಟಾ(ಫೇಸ್‌ಬುಕ್) ಅಂಗ ಸಂಸ್ಥೆಯಾಗಿರುವ ವಾಟ್ಸ್‌ಆ್ಯಪ್‌ನಲ್ಲಿ ರಾಜಕೀಯ ಪಕ್ಷಗಳು ಒಮ್ಮೆಗೆ ಬಲ್ಕ್ ಆಗಿ ಸಂದೇಶಗಳನ್ನು ಕಳಿಸಲು ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನವನ್ನು ತರುತ್ತವೆ. ಇದು ಸ್ವಯಂಚಾಲಿತ ನೂರಾರು ಸಂದೇಶಗಳನ್ನು ಒಮ್ಮೆಗೆ ಕಳುಹಿಸಲಿದೆ ಎಂದು ವಾಟ್ಸ್‌ಆ್ಯಪ್ ಸಂಸ್ಥೆ ಹೇಳಿದೆ.
ರಾಜಕೀಯ ಪಕ್ಷಗಳು ಮತದಾರರಿಗೆ ವಾಟ್ಸ್‌ಆ್ಯಪ್ ಮೂಲಕ ಬಲ್ಕ್ ಸಂದೇಶಗಳನ್ನು ಕಳುಹಿಸಲು ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್-ಎಪಿಐ ಟೂಲ್ ನೆರವಾಗಲಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಹಂಚಿಕೆಯಾಗುವ ಒಂದು ಬಲ್ಕ್ ಸಂದೇಶಕ್ಕೆ 8 ರಿಂದ 10 ಪೈಸೆ ನಿಗದಿ ಮಾಡಲಾಗಿದೆ.
ಜನಪ್ರಿಯ ಮೊಬೈಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಇದೇ ವೇಳೆ ತನ್ನ ಬಳಕೆದಾರರ ಆನ್‌ಲೈನ್ ಸುರಕ್ಷತೆಯ ಬಗ್ಗೆ ಹಾಗೂ ಚುನಾವಣಾ ಸಮಗ್ರತೆಯನ್ನು ಕಾಪಾಡುವ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತದೆ ಎಂದು ಹೇಳಿದೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ವೈಯಕ್ತಿಕವಾಗಿ ಅಭ್ಯರ್ಥಿಗಳು ಮತದಾರರನ್ನು ತಲುಪಲು ವಾಟ್ಸ್‌ಆ್ಯಪ್ ವೇದಿಕೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದೂ ವಾಟ್ಸ್‌ಆ್ಯಪ್ ಆರೋಪಿಸಿದೆ.
ವಾಟ್ಸ್‌ಆ್ಯಪ್‌ನ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಂತಹ ಖಾತೆಗಳನ್ನು ನಿಷೇಧಿಸುವುದು ಸೇರಿದಂತೆ ಸ್ವಯಂಚಾಲಿತ ಹಾಗೂ ಬೃಹತ್ ಸಂದೇಶ ಕಳುಹಿಸುವಿಕೆಯಲ್ಲಿ ತೊಡಗಿರುವ ಖಾತೆಗಳನ್ನು ಗುರುತಿಸಿ ಕ್ರಮಕೈಗೊಳ್ಳಲು ಸುಧಾರಿತ ಸ್ಪ್ಯಾಮ್ ಪತ್ತೆ ತಂತ್ರಜ್ಞಾನವನ್ನು ಸಂಸ್ಥೆ ಹೊಂದಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
ಬೃಹತ್ ಅಥವಾ ಸ್ವಯಂಚಾಲಿತ ಸಂದೇಶಗಳನ್ನು ಕಳುಹಿಸುವ ಮೂಲಕ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ತೊಡಗಿರುವ ಅಥವಾ ಇತರರಿಗೆ ಸಹಾಯ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ವಾಟ್ಸ್‌ಆ್ಯಪ್ ಸ್ಪಷ್ಟಪಡಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ