ETV Bharat / lifestyle

ಚಂದಾದಾರರ ಕರೆ, ಇಂಟರ್ನೆಟ್​ ಬಳಕೆ ದಾಖಲೆ ಎರಡು ವರ್ಷದವರೆಗೆ ಸಂಗ್ರಹಕ್ಕೆ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸೂಚನೆ

ಚಂದಾದಾರರ ಕರೆ ದಾಖಲೆ ಮತ್ತು ಇಂಟರ್​ನೆಟ್​ ಬಳಕೆಯ ದಾಖಲೆಯನ್ನು ಎರಡು ವರ್ಷದವರಗೆ ಸಂಗ್ರಹಕ್ಕೆ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

author img

By

Published : Dec 24, 2021, 5:54 PM IST

Govt mandates telcos to keep call data, internet usage record for minimum 2 years
ಎರಡು ವರ್ಷದವರೆಗೆ ಕರೆ ದಾಖಲೆ, ಇಂಟರ್ನೆಟ್​ ಬಳಕೆ ಆರ್ಕೈವ್​ಗೆ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸೂಚನೆ

ನವದೆಹಲಿ: ಭದ್ರತಾ ಕಾರಣಗಳಿಗಾಗಿ ಟೆಲಿಕಾಂ ಇಲಾಖೆ ವಿವಿಧ ನೆಟ್​ವರ್ಕ್​ಗಳ ಚಂದಾದಾರರ ಕರೆ ಡೇಟಾ ಮತ್ತು ಇಂಟರ್ನೆಟ್​​ ಬಳಕೆಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಗಳವರೆಗೆ ವಿಸ್ತರಿಸಿದೆ.

ನೆಟ್​ವರ್ಕ್​ಗೆ ಲೈಸನ್ಸ್ ಹೊಂದಿರುವ ಟೆಲಿಕಾಂ ಕಂಪನಿಗಳು ಕರೆ ವಿವರಗಳ ದಾಖಲೆ, ಕರೆ ವಿನಿಮಯ ವಿವರಗಳ ದಾಖಲೆ, ಐಪಿ ವಿವರದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಭದ್ರತಾ ಕಾರಣಗಳಿಗಾಗಿ ದಾಖಲೆಗಳನ್ನು ಕನಿಷ್ಠ ಎರಡು ವರ್ಷಗಳವರೆಗೆ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ.

ಎರಡು ವರ್ಷಗಳ ನಂತರ ಟೆಲಿಕಾಂ ಇಲಾಖೆಯಿಂದ ಯಾವುದೇ ನಿರ್ದೇಶನ ಇಲ್ಲದಿದ್ದರೆ, ಸಂಗ್ರಹ ಮಾಡಲ್ಪಟ್ಟ ಮಾಹಿತಿಯನ್ನು ಟೆಲಿಕಾಂ ಕಂಪನಿಗಳು ನಾಶಪಡಿಸಬಹುದಾಗಿದೆ. ಆದರೆ ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದಾಗಿ ಹೊಸ ತಿದ್ದುಪಡಿ ಅಗತ್ಯ ಎಂದು ಟೆಲಿಕಾಂ ಇಲಾಖೆಯ ಸುತ್ತೋಲೆ ಹೇಳಿದೆ.

ಇಷ್ಟೇ ಅಲ್ಲದೆ ಮೊಬೈಲ್ ಅಪ್ಲಿಕೇಶನ್‌ಗಳಿಂದ ಮಾಡಿದ ಕರೆಗಳು ಅಥವಾ ವೈಫೈನಿಂದ ಮಾಡಿದ ಕರೆಗಳು, ಇ-ಮೇಲ್, ಇಂಟರ್ನೆಟ್ ಟೆಲಿಫೋನಿ ಸೇವೆಗಳಂತಹ ಸೇವೆಗಳು, ಚಂದಾದಾರರ ಲಾಗಿನ್ ಮತ್ತು ಲಾಗ್‌ಔಟ್ ವಿವರಗಳು ಸೇರಿದಂತೆ ಎಲ್ಲ ಇಂಟರ್ನೆಟ್ ಡೇಟಾ ದಾಖಲೆಗಳನ್ನು ಕನಿಷ್ಠ ಎರಡು ವರ್ಷಗಳವರೆಗೆ ನಿರ್ವಹಿಸಲು ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.

ಈ ಹಿಂದೆ ಕರೆ ಡೇಟಾ ಮತ್ತ ಇಂಟರ್​ನೆಟ್ ಬಳಕೆಯ ದಾಖಲೆಯನ್ನು ಕನಿಷ್ಠ ಒಂದು ವರ್ಷದವರೆಗೆ ಸಂಗ್ರಹ ಮಾಡಬೇಕೆಂದು ಆದೇಶ ಹೊರಡಿಸಲಾಗಿತ್ತು.

ಇದನ್ನೂ ಓದಿ:ಅಲಿಗಢ ವಿವಿ ವಿದ್ಯಾರ್ಥಿಗಳಿಂದ ಹೈಬ್ರಿಡ್​ ಎಲೆಕ್ಟ್ರಿಕ್​ ವಾಹನ ವಿನ್ಯಾಸ.. ಎಪಿಸೈಕಲ್​ ಸ್ಪರ್ಧೆಯಲ್ಲಿ 5ನೇ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.