ಸ್ಯಾನ್ ಫ್ರಾನ್ಸಿಸ್ಕೊ : ಆ್ಯಪಲ್ ಮ್ಯಾಕ್ಸ್ ಬಳಕೆದಾರರ ಉಪಯುಕ್ತತತೆಗಾಗಿ ಎಂ-1 ಚಿಪ್‌ನೊಂದಿಗೆ ಹೊಸ ಕ್ರೋಮ್ ಆವೃತ್ತಿ ಪರಿಚಯಿಸಲು ಗೂಗಲ್ ಮುಂದಾಗಿದೆ.
ಆ್ಯಪಲ್ ಮ್ಯಾಕ್ಸ್ ಬಳಕೆದಾರರಿಗಾಗಿ ಈ ಹೊಸ ಕ್ರೋಮ್ ಆವೃತ್ತಿಯನ್ನು ಎಂ-1 ಚಿಪ್‌ನೊಂದಿಗೆ ಪರಿಚಯಿಸಲು ಗೂಗಲ್ ಮುಂದಾಗಿದ್ದು, ಇದು ಬಳಕೆದಾರರ ಸ್ನೇಹಿಯಾಗಿದೆ. ಈ ಹಿಂದಿನ ವರ್ಷನ್ಗಳಿಗಿಂತಲೂ ಇದು ವೇಗವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಗೂಗಲ್ ತಿಳಿಸಿದೆ.
ಆ್ಯಪಲ್ ಪ್ರೊಸೆಸರ್ ಒಳಗೊಂಡ ಹೊಸ ಮ್ಯಾಕ್ಸ್ ಸಾಧನಗಳಿಗೆ ಸರಿಯಾಗಿ ಹೊಂದಿಕೆಯಾಗುವಂತೆ ಕ್ರೋಮ್‌ನ ಹೊಸ ಆವೃತ್ತಿಯನ್ನು ಸೇರಿಸಲಾಗಿದ್ದು, ಕ್ರೋಮ್ ಡೌನ್‌ಲೋಡ್ ಪುಟವನ್ನು ಈ ಉದ್ದೇಶದಿಂದಾಗಿ ನವೀಕರಿಸಲಾಗಿದೆ ಎಂದು ಗೂಗಲ್ ಈ ಹಿಂದೆ ಹೇಳಿತ್ತು.
ಅದೇ ರೀತಿ ಇದೀಗ ಎಂ-1 ಚಿಪ್‌ನೊಂದಿಗೆ ಹೊಸ ಕ್ರೋಮ್ ಆವೃತ್ತಿಯನ್ನು ಪರಿಚಯಿಸಲು ಸಕಲ ಸಿದ್ಧತೆಗಳು ನಡೆದಿವೆ. ಈ ನೂತನ ಕ್ರೋಮ್ ಆವೃತ್ತಿಯು ಆ್ಯಪಲ್ ಮ್ಯಾಕ್ಸ್ ಬಳೆಕೆದಾರರಿಗೆ ಸೀಮಿತವಾಗಿ ಪರಿಚಯಿಸಲಾಗುತ್ತಿದ್ದು, ಆ್ಯಪಲ್ ಪ್ರೊಸೆಸರ್ ಹೊಂದಿರುವ ಹೊಸ ಮ್ಯಾಕೋಸ್ ಸಾಧನಗಳಲ್ಲಿ ಮಾತ್ರ ಇದು ಕಾರ್ಯ ನಿರ್ವಹಿಸಲಿದೆ ಎಂದು ಕಂಪನಿ ತಿಳಿಸಿದೆ.