ಸ್ಯಾನ್ ಫ್ರಾನ್ಸಿಸ್ಕೋ : ಆಂಡ್ರಾಯ್ಡ್ ಸಾಧನಗಳಲ್ಲಿ ಮ್ಯಾಪ್ ಒಳಗಡೆ ದಿಕ್ಸೂಚಿ (ಕಂಪಾಸ್) ವಿಜೆಟ್ ಅನ್ನು ಮರಳಿ ತರುತ್ತಿರುವುದಾಗಿ ಗೂಗಲ್ ಪ್ರಕಟಿಸಿದೆ.
ಆಂಡ್ರಾಯ್ಡ್ ದಿಕ್ಸೂಚಿ ವಿಜೆಟ್ ಅನ್ನು ಮರಳಿ ತರುವ ಬಗ್ಗೆ ಘೋಷಿಸಲು ನಾವು ಸಂತೋಷಗೊಂಡಿದ್ದೇವೆ. ನ್ಯಾವಿಗೇಶನ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುವ ಸಲುವಾಗಿ 2019 ರ ಆರಂಭದಲ್ಲಿ ಆಂಡ್ರಾಯ್ಡ್ ಸಾಧನಗಳ ಮ್ಯಾಪ್ನಿಂದ ದಿಕ್ಸೂಚಿಯನ್ನು ತೆಗೆದು ಹಾಕಲಾಗಿತ್ತು. ಇದೀಗ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಅದನ್ನು ಮತ್ತೆ ತರಲಾಗ್ತಿದೆ ಎಂದು ಗೂಗಲ್ ಹೇಳಿದೆ.
ತಲುಪಬೇಕಾದ ಸ್ಥಳಕ್ಕೆ ನ್ಯಾವಿಗೇಟ್ ಮಾಡಲು ನೀವು ಆಂಡ್ರಾಯ್ಡ್‌ನಲ್ಲಿ ಮ್ಯಾಪ್ ಬಳಸುವಾಗ, ದಿಕ್ಸೂಚಿ ಮತ್ತೆ ಪರದೆಯ ಬಲಭಾಗದಲ್ಲಿರುವ ವಿಜೆಟ್‌ಗಳಲ್ಲಿ ಒಂದಾಗಿ ಕಾಣಿಸುತ್ತದೆ. ನೀವು ತಿರುಗುತ್ತಿರುವಾಗ, ಕೆಂಪು ಬಾಣವು ಉತ್ತರ ದಿಕ್ಕಿನಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಜಾಗತಿಕವಾಗಿ ಆಂಡ್ರಾಯ್ಡ್ 10.62 ಆವೃತ್ತಿಯ ಬಳಕೆದಾರರಿಗೆ ಈ ವೈಶಿಷ್ಟ್ಯ ಲಭ್ಯವಿದೆ. ಐಒಎಸ್ನಲ್ಲಿ ಗೂಗಲ್ ಮ್ಯಾಪ್ ಬಳಕೆದಾರರಿಗೆ ದಿಕ್ಸೂಚಿ ತೆಗೆದುಹಾಕಲಾಗಿಲ್ಲ. ಅದು ಈಗಲೂ ಲಭ್ಯವಿದೆ ಎಂದು ಗೂಗಲ್ ತಿಳಿಸಿದೆ.