ಬೆಂಗಳೂರು: ಸಿಲಿಕಾನ್ ಸಿಟಿ ಜನರು ಅಂದ್ರೆ ಇಲ್ಲಿ ಫ್ಯಾಷನ್ ಪ್ರಿಯರಿಗೇನು ಕಮ್ಮಿ ಇಲ್ಲ. ಸೀಸನ್ಗೆ ತಕ್ಕಂತೆ ಟ್ರೆಂಡ್ಗಳು ಬದಲಾಗುತ್ತಾ ಹೋಗುತ್ತೆ. ಆದ್ರಲ್ಲೂ ಇದೀಗ ಜನ ಬೆರಳಿನ ಅಂದ ಹೆಚ್ಚಿಸಿಕೊಳ್ಳೋದನ್ನು ಶುರು ಮಾಡಿದ್ದಾರೆ.
ದಿನಕ್ಕೊಂದು ಹೊಸ ಸ್ಟೈಲ್, ಹೊಸ ಫ್ಯಾಷನ್ ಬರುತ್ತಲೇ ಇರುತ್ತೆ. ಕಾಂಪಿಟೇಟಿವ್ ಜಗತ್ತಿನಲ್ಲಿ ಬ್ಯೂಟಿಗೂ ಹೆಚ್ಚು ಮಹತ್ವ ಇರೋದ್ರಿಂದ ಸಲೀಸಾಗಿ ನೀರೆಯರು ಹೊಸ ಫ್ಯಾಷನ್‌ಗಳತ್ತ ಮುಖ ಮಾಡುತ್ತಾರೆ. ಹೆಣ್ಣಿನ ಅಂದ ಹೆಚ್ಚಿಸಲು ಕೇವಲ ಮುಖದ ಅಂದ ಮಾತ್ರವಲ್ಲ ಈಗ ಹೊಸದೊಂದು ಟ್ರೆಂಡ್ ಕೂಡ ಶುರುವಾಗಿದೆ.
ಇತ್ತೀಚಿನ ದಿನಗಳಲ್ಲಿ ನೈಲ್ ಆರ್ಟ್ ಹೆಣ್ಣು ಮಕ್ಕಳನ್ನ ತನ್ನೆಡೆ ಸೆಳೆಯುತ್ತಿದೆ. ನವಿರಾದ ಕೈ ಅಥವ ಕಾಲು ಬೆರಳಿನ ಉಗುರುಗಳಿಗೆ ಬಣ್ಣ ಹಚ್ಚಿ ಅದಕ್ಕೊಂದಿಷ್ಟು ಅಲಂಕಾರ ಮಾಡಿದ್ರೆ ಅದು ಮತ್ತಷ್ಟು ಮೋಹಕವಾಗಿ ಕಾಣುತ್ತದೆ.
ಕೈಗಳ ಮತ್ತು ಕಾಲುಗಳ ಅಂದ ಹೆಚ್ಚಾಗಿರಬೇಕೆಂದ್ರೆ ನೈಲ್ಗಳು ಕಲರ್ಫುಲ್ ಆಗಿರಬೇಕು. ಈ ಮೊದಲು ಉಗುರಿಗೆ ಬಣ್ಣ ಹಚ್ಚುತ್ತಿದ್ದು, ಆ ಬಣ್ಣ ಅಳಿಸಿದಾಗ ಅಥವಾ ಬೇರೆ ಬಣ್ಣದ ಮೇಲೆ ಆಸೆ ಆದಾಗ ಹೊಸ ಬಣ್ಣವನ್ನ ಹಚ್ಚುತ್ತಿದ್ದರು. ಇದೀಗ ಈ ಟ್ರೆಂಡ್ ಬದಲಾಗಿದ್ದು, ಮಹಿಳೆಯರು ನೈಲ್ ಆರ್ಟ್ಗೆ ಮೊರೆ ಹೋಗುತ್ತಿದ್ದು ಮಿಕ್ಸ್ ಅಂಡ್ ಮ್ಯಾಚ್ನ ಕಾನ್ಸೆಪ್ಟ್ ಕೂಡ ಟ್ರೆಂಡ್ನಲ್ಲಿದೆ.
ಕ್ಯೂಟ್ ಹಾರ್ಟ್, ಕಲರ್ಫುಲ್ ಬ್ರೈಡಲ್ ಡಿಸೈನ್ಗಳು, ಬಟರ್ ಫ್ಲೈ ಡಿಸೈನ್, ಡೈಮಂಡ್ ಆರ್ಟ್, ಎಂಗೆಜ್ಮೆಂಟ್ ಆರ್ಟ್ ಹೀಗೆ ನಾನಾ ರೀತಿಯ ಡೈನ್‌ಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡ್ನಲ್ಲಿದ್ದು, ಫ್ಯಾಷನ್ ಲೋಕದಲ್ಲಿ ಮೋಡಿ ಮಾಡ್ತಿವೆ.