ETV Bharat / jagte-raho

ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಗಲಭೆಗೆ ಯುವಕ ಬಲಿ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಕುಟುಂಬ - Yasin died in riot

ಬೆಂಗಳೂರಿನ ಡಿ ಜೆ ಹಳ್ಳಿ, ಮತ್ತು ಕೆ ಜಿ ಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಪರಿಸ್ಥಿತಿ ಕೈಮೀರಿತ್ತು. ಇದೀಗ ಪೊಲೀಸರು ಗಲಭೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

yasin died
ಗಲಭೆಯಲ್ಲಿ ಯಾಸಿನ್​ ಸಾವು
author img

By

Published : Aug 12, 2020, 12:07 PM IST

Updated : Aug 12, 2020, 12:13 PM IST

ಬೆಂಗಳೂರು: ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಮಟನ್​ ಅಂಗಡಿ ನಡೆಸುತ್ತಿದ್ದ ಯುವಕನೋರ್ವ ಗಲಭೆಯಲ್ಲಿ ಸಾವನ್ನಪ್ಪಿದ್ದಾನೆ.

ಸದ್ಯ ಪೊಲೀಸರು ಗಲಭೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗಲಭೆಯಲ್ಲಿ ಯಾಸಿನ್​ ಎಂಬ ಯುವಕ ಬಲಿಯಾಗಿದ್ದು, ಆತನ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಫೈರಿಂಗ್​​​ಗೆ ಒಳಗಾದ ಯಾಸಿನ್ ಕುಟುಂಬಸ್ಥರಿಂದ ನ್ಯಾಯಕ್ಕಾಗಿ ಒತ್ತಾಯ: ಪ್ರತಿಭಟನೆ

ನಮ್ಮ ಮಗ ಗಲಾಟೆಯಲ್ಲಿ ಭಾಗಿಯಾಗಿಲ್ಲ. ಪೊಲೀಸ್​ ಠಾಣೆ ಬಳಿ ನಾವು ಮನೆ ಮಾಡಿದ್ದೇ ತಪ್ಪು ಎಂದು ಮೃತನ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

Last Updated : Aug 12, 2020, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.