ಸಹರಾಂಪುರ (ಉತ್ತರ ಪ್ರದೇಶ): ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಕುಟುಂಬದ ಸದಸ್ಯರಿಗೆ ಊಟ ಕೊಡಲೆಂದು ಹೋಗುತ್ತಿದ್ದ ಮಹಿಳೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಸಹರಾಂಪುರದಲ್ಲಿ ನಡೆದಿದೆ.
ಸಹರಾಂಪುರದ ಮಿಲ್ಕೋ ಗ್ರಾಮದಲ್ಲಿನ ಕಬ್ಬಿನ ಗದ್ದೆಗೆ ಮಹಿಳೆಯನ್ನು ಹೊತ್ತೊಯ್ದು ಮೂವರು ಕೃತ್ಯ ಎಸಗಿದ್ದಾರೆ. ಮಹಿಳೆ ಕೂಗಾಡುತ್ತಿರುವುದನ್ನು ಕೇಳಿಸಿಕೊಂಡ ಆಕೆಯ ಮಕ್ಕಳು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಹರಾಂಪುರ ಪೊಲೀಸರು, ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿಗಳ ನಡುವೆ ಭೂವಿವಾದವಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.