ರಾಯಚೂರು: ಹಾರ್ಟ್ ಸರ್ಜರಿ ಹೆಸರಿನಲ್ಲಿ ಅಪರಿಚಿತರು ವ್ಯಕ್ತಿಯೋರ್ವನಿಗೆ ಒಂದು ಲಕ್ಷ ರೂಪಾಯಿ ವಂಚಿಸಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ಕೆ.ಶ್ರೀನಿವಾಸ ವಂಚನೆಗೊಳ್ಳದ ವ್ಯಕ್ತಿಯಾಗಿದ್ದಾರೆ. ಕೆ.ಶ್ರೀನಿವಾಸ, ಟಿಎನ್ಎ.ವಿಜಯರಾಜ್ ಇಬ್ಬರು ಸ್ನೇಹಿತರು. ವಂಚಕರು ಟಿಎನ್ಎ.ವಿಜಯರಾಜ್ ಹೆಸರು ಬಳಸಿಕೊಂಡು, ಕೆ.ಶ್ರೀನಿವಾಸಗೆ ಮೋಸ ಮಾಡಿದ್ದಾರೆ.
ಕೆ.ಶ್ರೀನಿವಾಸ್ರಿಗೆ ವಂಚಕರು 876990025 ಮೊಬೈಲ್ ಸಂಖ್ಯೆಯಿಂದ ಟಿಎನ್ಎ.ವಿಜಯರಾಜ್ ಎಂದು ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ. ಸ್ನೇಹಿತ ಎಂದು ವಾಟ್ಸಪ್‌ನಲ್ಲಿಯೇ ಚಾಟಿಂಗ್ ಮಾಡಿಕೊಂಡು, ಆರಂಭದಲ್ಲಿ ಸ್ನೇಹದಂತೆ ಯೋಗಕ್ಷೇಮ ವಿಚಾರಿಸಿದ್ದಾರೆ.
ಇದಾದ ಬಳಿಕ ನಾನು ಯುಎಸ್ಎ ನಲ್ಲಿ ಇರುವುದಾಗಿ ನಂಬಿಸಿ, ನಮ್ಮ ಪತ್ನಿಯ ಸಹೋದರಿಗೆ ಹಾರ್ಟ್ ಸರ್ಜರಿ ಮಾಡಿಸಬೇಕಾಗಿದೆ. ನನ್ನ ಖಾತೆಯಿಂದ ಹಣ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀವು ಈಗ ಹಣ ನೀಡಿ ಎಂದು ಶ್ವೇತಾ ಎಂಬ ಹೆಸರಿನ ಎಸ್‌ಬಿಐ ಬ್ಯಾಂಕ್ ಖಾತೆ ಸಂ. 35486390382 ಹಾಗೂ ಐಎಫ್‌ಎಸ್‌ಸಿ ಕೋಡ್ ಕಳುಹಿಸಿ 50 ಸಾವಿರ ನೀಡುವಂತೆ ಸಂದೇಶ ಮೂಲಕ ಕೋರಿದ್ದಾರೆ.
ಇದನ್ನ ನಂಬಿ ಶ್ರೀನಿವಾಸ ತಮ್ಮ ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 25 ಸಾವಿರ ರೂಪಾಯಿ ರವಾನಿಸಿದ್ದಾರೆ. ಇದಾದ ಬಳಿಕ ಮತ್ತೊಮ್ಮೆ ಹೆಚ್ಚಿನ ಮೊತ್ತದ ಹಣ ಅವಶ್ಯಕತೆಯಿದೆ ಎಂದು ಹೇಳಿ ಮೆಸೇಜ್ ಮಾಡಿದ್ದಾರೆ. ಆಗ ಶ್ರೀನಿವಾಸ ತಮ್ಮ ಮಗನ ಗೂಗಲ್ ಪೇ ಮೂಲಕ ಒಂದು ಬಾರಿ 50 ಸಾವಿರ, ಎರಡನೇ ಬಾರಿ 25 ಸಾವಿರ ಹಾಗೂ ಮೊದಲಿಗೆ 25 ಸಾವಿರ ಸೇರಿ ಒಟ್ಟು 1 ಲಕ್ಷ ರೂಪಾಯಿ ಹಣವನ್ನ ವರ್ಗಾವಣೆ ಮಾಡಿದ್ದಾರೆ.
ಹಣ ಪಾವತಿ ಮಾಡಿದ ಬಳಿಕ ತಮ್ಮ ಸ್ನೇಹಿತ ವಿಜಯ್ ರಾಜ್ ಹೆಸರಿನಲ್ಲಿ ವಾಟ್ಸಪ್ ಸಂದೇಶ ಕಳುಹಿಸಿ, ಪೋಟೋ ಬಳಸಿಕೊಂಡು, ವಂಚನೆ ಮಾಡಿರುವುದು ತಿಳಿದು ಬಂದಿದೆ. ಇದರಿಂದ ಎಚ್ಚೆತ್ತುಕೊಂಡು ಇದೀಗ ರಾಯಚೂರು ಸೈಬರ್ ಪೊಲೀಸ್ ಠಾಣೆಗೆ ಅಪರಿಚಿತರು ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ಕಲಂ 66(ಸಿ), 66(ಡಿ), ಐಡಿ ಕಾಯಿದೆಯಡಿ 2008 ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.