ಲಖನೌ (ಉ.ಪ್ರ): ಉತ್ತರ ಪ್ರದೇಶದ ಬರಾಬಂಕಿಯಲ್ಲಿ ಶುಕ್ರವಾರ ರಾತ್ರಿ ವಿಶೇಷ ಕಾರ್ಯಪಡೆಯ ತಂಡದೊಂದಿಗೆ ಉತ್ತರ ಪ್ರದೇಶ ಪೊಲೀಸರು ಮೋಸ್ಟ್ ವಾಂಟೆಡ್ ಅಪರಾಧಿಯ ಎನ್‌ಕೌಂಟರ್ ನಡೆಸಿದ್ದಾರೆ.
ಅಪರಾಧಿಯನ್ನ ಟಿಂಕು ಕಪಾಲಾ ಎಂದು ಗುರುತಿಸಲಾಗಿದ್ದು, ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಆತ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
"ಆತನ ಮೇಲೆ ಒಟ್ಟು 27 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಹೆಚ್ಚಿನವು ಕೊಲೆ ಮತ್ತು ಲೂಟಿ ಪ್ರಕರಣಗಳು" ಎಂದು ಬರಾಬಂಕಿ ಎಸ್ಪಿ ಡಾ.ಅರವಿಂದ ಚತುರ್ವೇದಿ ಹೇಳಿದ್ದಾರೆ.
ಕಳೆದ ವರ್ಷ ರಾಜ್ಯದ ಕೃಷ್ಣನಗರ ಆಭರಣ ಪ್ರಕರಣದಲ್ಲಿ ಈ ಅಪರಾಧಿ ಭಾಗಿಯಾಗಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದರು ಎಂದು ಅವರು ಹೇಳಿದರು.