ಮುಂಬೈ: ಫೇಸ್ಬುಕ್ನಲ್ಲಿ ಪರಿಚಯವಾಗಿ ಸ್ನೇಹಿತನಾಗಿರುವ ಯುವಕನೋರ್ವ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ 'ಉಡಾನ್' ಟೆಲಿವಿಷನ್ ಶೋ ಖ್ಯಾತಿಯ ನಟಿ ಮಾಲ್ವಿ ಮಲ್ಹೋತ್ರಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಮುಂಬೈನ ವರ್ಸೋವಾದ ಕೃಷಿ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ರಸ್ತೆಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ದುಬೈನಲ್ಲಿ ಶೂಟಿಂಗ್ ಮುಗಿಸಿ ಮಾಲ್ವಿ ನಿನ್ನೆಯಷ್ಟೇ ಮುಂಬೈಗೆ ಹಿಂದಿರುಗಿದ್ದರು. ಗಾಯಗೊಂಡಿರುವ ಮಾಲ್ವಿಯನ್ನು ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿತ್ರ ನಿರ್ಮಾಪಕ ಎಂದು ಹೇಳಲಾಗಿರುವ ಕುಮಾರ್ ಮಹಿಪಾಲ್ ಸಿಂಗ್ ಆರೋಪಿಯಾಗಿದ್ದು, 2019 ರಿಂದ ಈತ ಮಾಲ್ವಿ ಜೊತೆ ಫೇಸ್ಬುಕ್ನಲ್ಲಿ ಪರಿಚಯವಿದ್ದಾನೆ. ಇವರಿಬ್ಬರು ಕೆಲ ಬಾರಿ ಭೇಟಿಯಾಗಿದ್ದಾರೆ ಎಂದು ಕೂಡ ಹೇಳಲಾಗಿದೆ. ಈ ಸಂಬಂಧ ಕುಮಾರ್ ಮಹಿಪಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಮಾಲ್ವಿ ಮಲ್ಹೋತ್ರಾ ಪ್ರಸಿದ್ಧ ಟೆಲಿವಿಷನ್ ಶೋ 'ಉಡಾನ್' ಹಾಗೂ 'ಹೋಟೆಲ್ ಮಿಲನ್' ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.