ಜಮ್ಮು-ಕಾಶ್ಮೀರ: ಉಗ್ರ ಸಂಘಟನೆಯಾದ 'ದಿ ರೆಸಿಸ್ಟೆನ್ಸ್ ಫೋರ್ಸ್' (ಟಿಆರ್‌ಎಫ್)ನ ಇಬ್ಬರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದು, ಅವರ ಬಳಿ ಇದ್ದ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಜಮ್ಮುವಿನ ನಾರ್ವಾಲ್ ಬೈಪಾಸ್‌ನಲ್ಲಿ ಶುಕ್ರವಾರ ಸಂಜೆ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ವಾಹನಗಳ ತಪಾಸಣೆ ಕೈಗೊಂಡಿತ್ತು. ಈ ವೇಳೆ ಆಲ್ಟೋ ಕಾರಿನಲ್ಲಿದ್ದವರು ಚೆಕ್ಪಾಯಿಂಟ್ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅನುಮಾನಗೊಂಡ ಪೊಲೀಸರು ಕಾರನ್ನು ಬೆನ್ನತ್ತಿ ಉಗ್ರರನ್ನು ಬಂಧಿಸಿದ್ದಾರೆ. ಎಕೆ ಅಸಾಲ್ಟ್ ರೈಫಲ್, 2 ಮ್ಯಾಗಜಿನ್ಗಳು, 60 ಬುಲೆಟ್ಗಳು, ಒಂದು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಓದಿ: ಗುಂಡಿನ ಚಕಮಕಿ : ಓರ್ವ ಉಗ್ರ ಸಾವು, ಇಬ್ಬರು ಭದ್ರತಾ ಸಿಬ್ಬಂದಿ ಗಾಯ
ಟಿಆರ್‌ಎಫ್, ಲಷ್ಕರ್- ಇ -ತೊಯ್ಬಾ (ಎಲ್‌ಇಟಿ) ಜೊತೆ ನಿಕಟ ಸಂಪರ್ಕ ಹೊಂದಿರುವ ಸಂಘಟನೆಯಾಗಿದೆ. ಜಮ್ಮು ಪೊಲೀಸರು ಇದೀಗ ಟಿಆರ್‌ಎಫ್ ಜಾಲವನ್ನು ಭೇದಿಸಲು ತನಿಖೆ ಆರಂಭಿಸಿದ್ದಾರೆ.