ETV Bharat / jagte-raho

ಎಟಿಎಂ ದುರ್ಬಳಕೆ ಮಾಡಿಕೊಂಡು ಹಣ ದೋಚುತ್ತಿದ್ದ ಇಬ್ಬರು ಖದೀಮರ ಬಂಧನ

ಎಟಿಎಂ ಬಗ್ಗೆ ಮಾಹಿತಿ ಇಲ್ಲದ ಮಹಿಳೆಯೊಬ್ಬರಿಗೆ ಹಣ ಡ್ರಾ ಮಾಡಿಕೊಟ್ಟ ವ್ಯಕ್ತಿಗಳಿಬ್ಬರು ಅಸಲಿ ಎಟಿಎಂ ಕೊಡುವ ಬದಲು ನಕಲಿ ಎಟಿಎಂ ಕೊಟ್ಟು ವಂಚಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ.

ಬಂಧಿತ ಆರೋಪಿಗಳು
author img

By

Published : Jun 8, 2019, 8:51 AM IST

ಹಾಸನ: ಎಟಿಎಂ ದುರ್ಬಳಕೆ ಮಾಡಿಕೊಂಡಿದ್ದಲ್ಲದೇ ಹಣ ದೋಚಿದ್ದ ಖದೀಮರಿಬ್ಬರನ್ನು ಬಂಧಿಸುವಲ್ಲಿ ಶ್ರವಣಬೆಳಗೊಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲೂಕು ಗದ್ದೆ ಬಿಂಡೇನಹಳ್ಳಿ ಗ್ರಾಮದ ಹೇಮಂತ್ (24) ಮತ್ತು ಮಂಜುನಾಥ್ (24) ಬಂಧಿತ ಆರೋಪಿಗಳು. ಖದೀಮರಿಬ್ಬರು ಪಟ್ಟಣದ ಕಾರ್ಪೊರೇಷನ್ ಬ್ಯಾಂಕ್ ಮತ್ತು ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿನ ಎಟಿಎಂನಲ್ಲಿ ಬೇರೆಯವರ ಎಟಿಎಂ ಕಾರ್ಡ್​ ಬಳಸಿ ಹಣ ಎಗರಿಸಿದ್ದರು.

ಜೂ.1 ರಂದು ಹೊಸಹಳ್ಳಿ ಗ್ರಾಮದ ಸುಕನ್ಯಾ ಎಂಬುವವರು ಶ್ರವಣಬೆಳಗೊಳದ ಕಾರ್ಪೊರೇಷನ್ ಬ್ಯಾಂಕ್​ನಲ್ಲಿ ಹಣ ಡ್ರಾ ಮಾಡಲು ಮುಂದಾಗಿದ್ದರು. ಹಣ ಡ್ರಾ ಮಾಡಲು ತಿಳಿಯದಿದ್ದಾಗ ಪಕ್ಕದಲ್ಲಿದ್ದ ಈ ಇಬ್ಬರು ಯುವಕರಿಗೆ ಡ್ರಾ ಮಾಡಿಕೊಡುವಂತೆ ಮನವಿ ಮಾಡಿದ್ದರು.

Two accused arrested after ATM abuse
ಬಂಧಿತ ಆರೋಪಿಗಳು

ಅವರಿಗೆ 20000 ಹಣವನ್ನ ಡ್ರಾ ಮಾಡಿಕೊಟ್ಟ ಖದೀಮರು ಬಳಿಕ ಅಸಲಿ ಎಟಿಎಂ ಕೊಡುವ ಬದಲು ನಕಲಿ ಎಟಿಎಂ ಕೊಟ್ಟು ವಂಚಿಸಿದ್ದಾರೆ. ಅಲ್ಲದೇ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿರುವ ಎಟಿಎಂನಲ್ಲಿ ಸುಕನ್ಯಾ ಖಾತೆಯಿಂದ ಅದೇ ಎಟಿಎಂ ಬಳಸಿ 20000 ಹಣವನ್ನು ದೋಚಿದ್ದಾರೆ.

ಹಣ ಪಡೆದ ಬಳಿಕ ಮರುದಿನ ಸುಕನ್ಯಾ ಬ್ಯಾಂಕಿಗೆ ಬಂದು ಪಾಸ್​ಬುಕ್ ಪರಿಶೀಲನೆ ಮಾಡಿದಾಗ 20000 ಹಣ ದೋಚಿರುವುದು ಗೊತ್ತಾಗಿದೆ. ಸುಕನ್ಯಾ ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಇದರನ್ವಯ ಎಟಿಎಂನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಹಣ ದೋಚಿದ್ದ ಇಬ್ಬರನ್ನು ಶ್ರವಣಬೆಳಗೊಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Intro:ಹಾಸನ: ಎಟಿಎಂ ಹಣ ದುರ್ಬಳಕೆ ಮಾಡಿಕೊಂಡು ಹಣ ದೋಚುತ್ತಿದ್ದಾರೆ ಇಬ್ಬರನ್ನು ಖದೀಮರನ್ನು ಬಂಧಿಸುವಲ್ಲಿ ಶ್ರಾವಣಬೆಳಗೊಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲೂಕು ಗದ್ದೆ ಬಿಂಡೇನಹಳ್ಳಿ ಗ್ರಾಮದ ಹೇಮಂತ್ (24) ಮತ್ತು ಮಂಜುನಾಥ್ (24) ಬಂಧಿತ ಆರೋಪಿಗಳಾಗಿದ್ದು ಪಟ್ಟಣದ ಕಾರ್ಪೊರೇಷನ್ ಬ್ಯಾಂಕ್ ಮತ್ತು ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿನ ಎಟಿಎಂ ಒಂದರಲ್ಲಿ ಬೇರೆಯವರ ಎಟಿಎಂ ನನ್ನ ಬಳಸಿ ಹಣವನ್ನು ಕಳ್ಳತನ ಮಾಡಿದರು.

ಜೂನ್ 1 ರಂದು ಹೊಸಹಳ್ಳಿ ಗ್ರಾಮದ ಸುಕನ್ಯಾ ಎಂಬುವರು ಶ್ರವಣಬೆಳಗೊಳದ ಕಾರ್ಪೊರೇಷನ್ ಬ್ಯಾಂಕಲ್ಲಿ ಹಣವನ್ನು ಡ್ರಾ ಮಾಡಲು ಮುಂದಾಗಿದ್ದಾರೆ. ಹಣವನ್ನ ಡ್ರಾ ಮಾಡಲು ತಿಳಿಯದಿದ್ದಾಗ ಪಕ್ಕದಲ್ಲಿದ್ದ ಈ ಇಬ್ಬರು ಯುವಕರಿಗೆ ಹಣವನ್ನ ಡ್ರಾ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಸುಕನ್ಯಾ ರವರಿಗೆ ಹಣವನ್ನ ಡ್ರಾ ಮಾಡಿ ಕೊಡುವ ನೆಪದಲ್ಲಿ 20000 ಹಣವನ್ನ ಡ್ರಾ ಮಾಡಿಕೊಟ್ಟು ಹೊಸಲಿ ಎಟಿಎಂ ಕೊಡುವ ಬದಲು ನಕಲಿ ಎಟಿಎಂನ ಕೊಟ್ಟು ವಂಚಿಸಿ ಬಳಿಕ ಚನ್ನರಾಯಪಟ್ಟಣದ ಬಾಗುರು ರಸ್ತೆಯಲ್ಲಿ ಇರುವ ಎಟಿಎಂ ಒಂದರಲ್ಲಿ ಸುಕನ್ಯಾ ಖಾತೆಯಿಂದ ಎಟಿಎಂ ಬಳಸಿ 20000 ಹಣವನ್ನು ದೋಚಿದ್ರು.

ಹಣ ಪಡೆದ ಬಳಿಕ ಮರುದಿನ ಸುಕನ್ಯಾ ರವರು ಬ್ಯಾಂಕಿಗೆ ಬಂದು ಪಾಸ್ ಪುಸ್ತಕ ಪರಿಶೀಲನೆ ಮಾಡಿದಾಗ 20000 ಹಣವನ್ನ ಬೇರೊಬ್ಬರು ದೋಚಿರುವುದು ಗೊತ್ತಾಗಿ ತಕ್ಷಣ ಪೊಲೀಸರಿಗೆ ದೂರು ನೀಡಿದರು. ದೂರಿನನ್ವಯ ಪ್ರಕರಣ ದಾಖಲಿಸಿ ಎಟಿಎಂ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿ ಹಣ ದೋಚಿದ್ದ ಇಬ್ಬರನ್ನು ಬಂಧಿಸುವಲ್ಲಿ ಶ್ರವಣಬೆಳಗೊಳ ಪೊಲೀಸರು ಯಶಸ್ವಿಯಾಗಿದ್ದು, ಇವರಿಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.Body:0Conclusion:

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.