ETV Bharat / bharat

ಪ್ರಧಾನಿ ಮೋದಿ ಇಂದು ಸಂಜೆ 'ದಿ ಸಾಬರಮತಿ ರಿಪೋರ್ಟ್' ಚಲನಚಿತ್ರ ವೀಕ್ಷಣೆ

ಪ್ರಧಾನಿ ನರೇಂದ್ರ ಮೋದಿ ಸಾಬರಮತಿ ರಿಪೋರ್ಟ್ ಚಲನಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಪ್ರಧಾನಿ ಮೋದಿ ಇಂದು ಸಂಜೆ 'ದಿ ಸಾಬರಮತಿ ರಿಪೋರ್ಟ್' ಚಲನಚಿತ್ರ ವೀಕ್ಷಣೆ
ಪ್ರಧಾನಿ ಮೋದಿ ಇಂದು ಸಂಜೆ 'ದಿ ಸಾಬರಮತಿ ರಿಪೋರ್ಟ್' ಚಲನಚಿತ್ರ ವೀಕ್ಷಣೆ (IANS)
author img

By ETV Bharat Karnataka Team

Published : 3 hours ago

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಸಂಜೆ 4 ಗಂಟೆಗೆ 'ದಿ ಸಾಬರಮತಿ ರಿಪೋರ್ಟ್' ಚಲನಚಿತ್ರ ವೀಕ್ಷಿಸಲಿದ್ದಾರೆ. 59 ಜನರ ಸಾವಿಗೆ ಕಾರಣವಾದ ಗೋಧ್ರಾ ರೈಲು ದಹನದ ಘಟನೆಯ ಸತ್ಯಗಳನ್ನು ಬಿಚ್ಚಿಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಈ ಹಿಂದೆ ಚಲನಚಿತ್ರವನ್ನು ಶ್ಲಾಘಿಸಿದ್ದಾರೆ.

ಸಂಸತ್ತಿನ ಗ್ರಂಥಾಲಯ ಕಟ್ಟಡದೊಳಗಿನ ಬಾಲಯೋಗಿ ಸಭಾಂಗಣದಲ್ಲಿ ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿದ 'ದಿ ಸಾಬರಮತಿ ರಿಪೋರ್ಟ್' ಚಲನಚಿತ್ರವನ್ನು ಪ್ರಧಾನಿ ಮೋದಿ ವೀಕ್ಷಿಸುವ ನಿರೀಕ್ಷೆಯಿದೆ. ಚಿತ್ರದ ವಿಶೇಷ ಪ್ರದರ್ಶನದಲ್ಲಿ ಅವರ ಅನೇಕ ಕ್ಯಾಬಿನೆಟ್ ಸಚಿವರು ಕೂಡ ಹಾಜರಿರುವ ಸಾಧ್ಯತೆಯಿದೆ.

ವಿಕ್ರಾಂತ್ ಮಾಸ್ಸಿ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ನಟಿಸಿರುವ ಸಾಬರಮತಿ ರಿಪೋರ್ಟ್ ಚಿತ್ರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, "ಕೊನೆಗೂ ಸತ್ಯ ಹೊರಬರುತ್ತಿರುವುದು ಒಳ್ಳೆಯದು, ಅದೂ ಸಾಮಾನ್ಯ ಜನರಿಗೆ ತಿಳಿಯುವ ರೀತಿಯಲ್ಲಿ" ಎಂದು ಹೇಳಿದರು. "ಸುಳ್ಳು ಮಾಹಿತಿಗಳು ಅಲ್ಪ ಕಾಲದವರೆಗೆ ಚಾಲ್ತಿಯಲ್ಲಿರುತ್ತವೆ. ಅಂತಿಮವಾಗಿ, ಸತ್ಯಗಳು ಯಾವಾಗಲೂ ಹೊರಬರುತ್ತವೆ" ಎಂದು ಪಿಎಂ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ವಿಶೇಷ ಎಂದರೆ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಸೇರಿದಂತೆ ಅನೇಕ ಬಿಜೆಪಿ ಮುಖ್ಯಮಂತ್ರಿಗಳು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಗೋಧ್ರಾ ರೈಲು ದುರಂತದ ವಾಸ್ತವತೆ ಚಿತ್ರಿಸುವ ಚಲನಚಿತ್ರ ವೀಕ್ಷಿಸುವಂತೆ ಜನರನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿ ಮಧ್ಯಪ್ರದೇಶ, ಯುಪಿ, ಹರಿಯಾಣ, ಛತ್ತೀಸ್ ಗಢ ಮತ್ತು ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ.

ಚಲನಚಿತ್ರವನ್ನು ನೋಡಿದ ನಂತರ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಚಲನಚಿತ್ರ ನಿರ್ಮಾಪಕರನ್ನು ಅಭಿನಂದಿಸಿದರು. ರಾಜಕೀಯ ಉದ್ದೇಶಗಳಿಗಾಗಿ ಸಾಮಾಜಿಕ ವಿಭಜನೆಗಳನ್ನು ಸೃಷ್ಟಿಸುವ ಕೆಲ ವ್ಯಕ್ತಿಗಳು ಮತ್ತು ಅವರ ದುರುದ್ದೇಶಪೂರಿತ ಅಜೆಂಡಾಗಳನ್ನು ಚಿತ್ರ ಬಹಿರಂಗಪಡಿಸುತ್ತದೆ ಎಂದು ಸಿಎಂ ಯೋಗಿ ಹೇಳಿದರು.

ಸಾಬರಮತಿ ಎಕ್ಸ್​ಪ್ರೆಸ್​ ರೈಲಿಗೆ ಬೆಂಕಿ ಹಚ್ಚಿದ ಘಟನೆ ಆಧರಿಸಿ ವಿಕ್ರಾಂತ್ ಮಾಸ್ಸಿ ಅಭಿನಯದ 'ದಿ ಸಾಬರಮತಿ ರಿಪೋರ್ಟ್' ಚಲನಚಿತ್ರವನ್ನು ತಯಾರಿಸಲಾಗಿದೆ. 2002ರ ಫೆಬ್ರವರಿ 27ರಂದು ಗುಜರಾತ್​ನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸ್​ಪ್ರೆಸ್​ನ ಎಸ್ 6 ಬೋಗಿಗೆ ಒಂದು ಗುಂಪಿನ ಜನ ಬೆಂಕಿ ಹಚ್ಚಿದ್ದರು. ಈ ಚಿತ್ರದಲ್ಲಿ, ನಾಯಕ ವಿಕ್ರಾಂತ್ ಮಾಸ್ಸಿ ಹಿಂದಿ ಪತ್ರಕರ್ತನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಚಿತ್ರದಲ್ಲಿ ವ್ಯವಸ್ಥೆಯ ವಿರುದ್ಧ ನಿಂತು ಸತ್ಯವನ್ನು ವರದಿ ಮಾಡುವ ಪಾತ್ರ ನಿಭಾಯಿಸಿದ್ದಾರೆ.

ಇದನ್ನೂ ಓದಿ : ತಿರುಪತಿಯಲ್ಲಿ ರಾಜಕೀಯ, ದ್ವೇಷದ ಭಾಷಣಗಳಿಗೆ ಟಿಟಿಡಿ ನಿಷೇಧ; ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.