ETV Bharat / jagte-raho

ತುಮಕೂರು: ರಸ್ತೆ ಬದಿ ನಿಂತಿದ್ದ ದ್ವಿಚಕ್ರ ವಾಹನಗಳ ಮೇಲೆ ಹರಿದ ಖಾಸಗಿ ಬಸ್ - ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್​​

ಹಕೀ ಕಾಂಪ್ಲೆಕ್ಸ್ ಬಳಿ ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಕ್ಕದಲ್ಲಿಯೇ ನಿಂತಿದ್ದ 15ಕ್ಕೂ ಹೆಚ್ಚು ಬೈಕ್ ಗಳ ಮೇಲೆ ಖಾಸಗಿ ಬಸ್​ವೊಂದು ಹರಿದಿದೆ.

Tumkur A private bus crashed on two-wheeled vehicles
ದ್ವಿಚಕ್ರ ವಾಹನಗಳ ಮೇಲೆ ಹರಿದ ಖಾಸಗಿ ಬಸ್
author img

By

Published : Jan 7, 2021, 10:07 PM IST

ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್​​ವೊಂದು ರಸ್ತೆ ಬದಿ ನಿಂತಿದ್ದ 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಮೇಲೆ ಹರಿದಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.

ದ್ವಿಚಕ್ರ ವಾಹನಗಳ ಮೇಲೆ ಹರಿದ ಖಾಸಗಿ ಬಸ್

ಪಟ್ಟಣದ ಗ್ರಾಮ ದೇವತಾ ವೃತ್ತದಲ್ಲಿ ಘಟನೆ ನಡೆದಿದ್ದು, ಕುಣಿಗಲ್​ನಿಂದ ತುಮಕೂರಿನತ್ತ ಖಾಸಗಿ ಬಸ್ ತೆರಳುತ್ತಿತ್ತು. ಹಕೀ ಕಾಂಪ್ಲೆಕ್ಸ್ ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಕ್ಕದಲ್ಲಿಯೇ ನಿಂತಿದ್ದ 15ಕ್ಕೂ ಹೆಚ್ಚು ಬೈಕ್ ಗಳ ಮೇಲೆ ಹರಿದಿದೆ.

ಓದಿ: ಬಿಡುಗಡೆಗೆ ಮುನ್ನವೇ ಲೀಕ್​ : ಬಹುನಿರೀಕ್ಷಿತ ಕೆಜಿಎಫ್-2 ಟೀಸರ್​ ರಿಲೀಸ್​ ಮಾಡಿದ ಚಿತ್ರತಂಡ

ಬಹುತೇಕವಾಗಿ ನಜ್ಜುಗುಜ್ಜಾಗಿದ್ದ ದ್ವಿಚಕ್ರವಾಹನಗಳನ್ನ ಕಂಡು ಮಾಲೀಕರು ಬಸ್ ಚಾಲಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.