ETV Bharat / jagte-raho

ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ: ಮೇಧಾ ಪಾಟ್ಕರ್​, ಯೋಗೇಂದ್ರ ಯಾದವ್​ ಸೇರಿ 37 ಮಂದಿ ವಿರುದ್ಧ FIR - social activist Medha Patkar

ಮೇಧಾ ಪಾಟ್ಕರ್, ಯೋಗೇಂದ್ರ ಯಾದವ್, ಗುರ್ನಾಮ್​ ಸಿಂಗ್​ ಚದುನಿ, ದರ್ಶನ್​ಪಾಲ್​ ಸಿಂಗ್ ಸೇರಿ 37 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಾಗಿದೆ.

Medha Patkar, Yogendra Yadav among 37 named in FIR
ಮೇಧಾ ಪಾಟ್ಕರ್​, ಯೋಗೇಂದ್ರ ಯಾ
author img

By

Published : Jan 28, 2021, 7:41 AM IST

ನವದೆಹಲಿ: ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರ ಸಂಬಂಧ ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ಮೇಧಾ ಪಾಟ್ಕರ್​, ಸ್ವರಾಜ್​ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್​​, ಭಾರತೀಯ ಕಿಸಾನ್​ ಯೂನಿಯನ್​ನ ಹರಿಯಾಣ ಘಟಕದ ಅಧ್ಯಕ್ಷ ಗುರ್ನಾಮ್​ ಸಿಂಗ್​ ಚದುನಿ ಸೇರಿದಂತೆ 37 ಮಂದಿ ವಿರುದ್ಧ ದೆಹಲಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಜೈ ಕಿಸಾನ್​​ ಆಂದೋಲನದ ಅವಿಕ್​ ಸಹಾ, ಭಾರತೀಯ ಕಿಸಾನ್​ ಯೂನಿಯನ್​ ವಕ್ತಾರ ರಾಕೇಶ್​ ತಿಕಾಯ್ತ್​, ರೈತ ಮುಖಂಡ ದರ್ಶನ್​ಪಾಲ್​ ಸಿಂಗ್​, ಸತ್ನಾಮ್​ ಸಿಂಗ್​ ಪನ್ನು - ಇವರುಗಳ ಹೆಸರು ಕೂಡ ಎಫ್​ಐಆರ್​ ಲಿಸ್ಟ್​​ನಲ್ಲಿದೆ.

Tractor rally violence
ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ

ಸೆಕ್ಷನ್​ 147, 148, 120B (ಅಪರಾಧಕ್ಕೆ ಪಿತೂರಿ), 307 (ಕೊಲೆಗೆ ಯತ್ನ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಿಂಸಾತ್ಮಕ ರ‍್ಯಾಲಿ: ರೈತ ಮುಖಂಡ ದರ್ಶನ್​ಪಾಲ್​ ಸಿಂಗ್​ಗೆ ನೋಟಿಸ್​ ನೀಡಿದ ದೆಹಲಿ ಪೊಲೀಸರು

ಮಾಹಿತಿಗಳ ಪ್ರಕಾರ, ಹಿಂಸಾಚಾರದಲ್ಲಿ 394 ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರನ್ನು ತೀವ್ರ ನಿಗಾ ಘಟಕ (ಐಸಿಯು)ದಲ್ಲಿರಿಸಲಾಗಿದೆ. ಈವರೆಗೆ 19 ಮಂದಿಯನ್ನು ಅರೆಸ್ಟ್​ ಮಾಡಲಾಗಿದ್ದು, 50 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ನಿಮ್ಮ ಮೇಲೆ ನಾವೇಕೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಾರದು ಎನ್ನುವುದಕ್ಕೆ ಮೂರು ದಿನದೊಳಗಾಗಿ ಉತ್ತರ ನೀಡುವಂತೆ ಸೂಚಿಸಿ ರೈತ ಮುಖಂಡ ದರ್ಶನ್​ಪಾಲ್​ ಸಿಂಗ್​ಗೆ ದೆಹಲಿ ಪೊಲೀಸರು ನೋಟಿಸ್​ ನೀಡಿದ್ದು, ವಿಧ್ವಂಸಕ ಕೃತ್ಯ ಎಸಗಿದವರ ಹೆಸರುಗಳನ್ನು ನೀಡುವಂತೆ ನಿರ್ದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.