ಬಸವಕಲ್ಯಾಣ: ಹಿಮ್ಮುಖವಾಗಿ ಚಲಿಸುತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಕಾರ್ಮಿಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ಗುರುವಾಡಿ ಗ್ರಾಮದ ಶೇಷರಾವ್ ಗಣಪತಿ ಗಾಯಕವಾಡ (35) ಮೃತ ವ್ಯಕ್ತಿ. ಕೆಲ ವರ್ಷಗಳಿಂದ ತಾಲೂಕಿನ ಪ್ರತಾಪೂರ ಗ್ರಾಮದಲ್ಲಿಯ ಹೆಂಡತಿ ತವರು ಮನೆಯಲ್ಲಿ ನೆಲೆಸಿದ್ದ. ಕೆಲಸಕ್ಕೆ ತೆರಳಿದ್ದ ವೇಳೆ ಶೇಷರಾವ್ ಟ್ರ್ಯಾಕ್ಟರ್ ಹಿಂದೆ ನಿಂತು ಮಣ್ಣು ತುಂಬುವಾಗ ಆಕಸ್ಮಿಕವಾಗಿ ಅದು ಹಿಮ್ಮುಖವಾಗಿ ಚಲಿಸಿದ್ದರಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‌ಐ ಅರುಣಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.