ತ್ರಿಶೂರ್: ಕೇರಳದ ತ್ರಿಶೂರ್ನ ಕುಟ್ಟನೆಲ್ಲೂರಿನಲ್ಲಿ ದಂತವೈದ್ಯೆಯನ್ನು ಚಾಕು ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂವಟ್ಟಪುಜ ನಿವಾಸಿ, ದಂತವೈದ್ಯೆ ಡಾ. ಸೋನಾ(30) ಹಾಗೂ ಆಕೆಯ ಗೆಳೆಯ ಮಹೇಶ್ ಇಬ್ಬರೂ ಸೇರಿ ಕುಟ್ಟನೆಲ್ಲೂರಿನಲ್ಲಿ ಡೆಂಟಲ್ ಕ್ಲಿನಿಕ್ವೊಂದನ್ನು ನಡೆಸುತ್ತಿದ್ದರು. ಸೋನಾ ವಿವಾಹ ವಿಚ್ಛೇದಿತ ಮಹಿಳೆಯಾಗಿದ್ದು, ಇಬ್ಬರು ಎರಡು ವರ್ಷಗಳಿಂದ ಫ್ಲ್ಯಾಟ್‌ವೊಂದರಲ್ಲಿ ವಾಸವಿದ್ದರು. ಹಣಕಾಸು ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಮಹೇಶ್ ವಿರುದ್ಧ ಸೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ವಿಚಾರ ತಿಳಿದ ಮಹೇಶ್ ಸೋನಾಗೆ ಚಾಕುವಿನಿಂದ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದರು. ಘಟನೆ ನಡೆದ ಎರಡು ದಿನದೊಳಗೆ ಪೊಲೀಸರು ಆರೋಪಿ ಮಹೇಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.