ನಿಜಾಮಾಬಾದ್: ಚಾಲಕನೊಬ್ಬ ಪಾನಮತ್ತಿನಲ್ಲಿ ನಿರ್ಲಕ್ಷ್ಯದಿಂದ ಅಡ್ಡಾದಿಡ್ಡಿ ಕಾರು ಚಲಾಯಿಸಿ ಮೂವರ ಸಾವಿಗೆ ಕಾರಣನಾದ ಘಟನೆ ನಿಜಾಮಾಬಾದ್ನಲ್ಲಿ ನಡೆದಿದೆ.
ಕಾರು ಚಾಲನೆ ಮಾಡುವ ಮೊದಲು ಚಾಲಕ ಮದ್ಯ ಸೇವಿಸಿ, ಮತ್ತಿನ ಅಮಲಿನಲ್ಲಿ ಕಾರು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಮೂವರ ಸಾವಿಗೆ ಕಾರಣ ಆಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪಾನಮತ್ತ ಕಾರು ಚಾಲಕನ ಕೃತ್ಯಕ್ಕೆ ಭೀಮಗಲ್ ಮಂಡಲ್ ಬಾದಾಭೀಮಲ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅತಿ ವೇಗದಲ್ಲಿ ಬಂದು ಹೋಟೆಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ಹೋಟೆಲ್ ಒಳಗೆ ಕುಳಿತಿದ್ದ ಹಿರಿಯ ವ್ಯಕ್ತಿ ಪುಪ್ಪಲಾ ಚಿನರಾಜಪ್ಪ (70) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದ್ವಿಚಕ್ರ ವಾಹನ ಓಡಿಸುತ್ತಿದ್ದ ಭೂಮಣ್ಣ (48) ಮತ್ತು ಭೂದೇವಿ (70) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಇಬ್ಬರು ಮಕ್ಕಳು ಅಪಘಾತದಿಂದ ಪಾರಾಗಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
20 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ, ಡ್ರಗ್ ಪೆಡ್ಲರ್ ಅರೆಸ್ಟ್
ಘಟನೆಯಲ್ಲಿ ಹಲವು ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.