ಪುಣೆ(ಮಹಾರಾಷ್ಟ್ರ): ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಕೆಲವರು ಕಳ್ಳತನ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಂದು ಕುಟುಂಬದಲ್ಲಿ ವಾಸವಾಗಿರುವ ಎಲ್ಲರೂ ಕಳ್ಳರು. ಈ ಗ್ಯಾಂಗ್ ಬಂಧನ ಮಾಡುವಲ್ಲಿ ಮಹಾರಾಷ್ಟ್ರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದ ಕುಟುಂಬವೊಂದರ ತಾಯಿ, ಪುತ್ರರು, ಪುತ್ರಿಯರು, ಅಷ್ಟೇ ಯಾಕೆ ಸೊಸೆಯಂದಿರೂ ಕೂಡ ಕಳ್ಳತನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಮಹಾರಾಷ್ಟ್ರದ ಅನೇಕ ಸ್ಥಳಗಳಲ್ಲಿ ಇವರು ಕಳ್ಳತನ ಮಾಡಿದ್ದು, 50 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಓದಿ: 12ನೇ ತರಗತಿ ವಿದ್ಯಾರ್ಥಿನಿ ಮೇಲೆ 9 ಕಾಮುಕರಿಂದ ಅತ್ಯಾಚಾರ
ಒಂದೇ ಕುಟುಂಬದ ಆರು ಮಂದಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಪರಾರಿಯಾಗಿದ್ದಾರೆ. ಇವರು ಇಲ್ಲಿಯವರೆಗೆ ಅನೇಕ ಚಿನ್ನದ ಆಭರಣ ಕಳ್ಳತನ ಮಾಡಿದ್ದು, ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ತೆಲಂಗಾಣ, ರಾಯ್ಪುರ್ ಸೇರಿದಂತೆ ಇತರ ರಾಜ್ಯದ ಆಭರಣ ಅಂಗಡಿಗಳಲ್ಲಿ ಇವರು ಕೈಚಳಕ ತೋರಿಸಿದ್ದಾರೆ.
ಪೊಲೀಸರಿಂದ ಐವರು ಆರೋಪಿಗಳಾದ ರೇಖಾ ಹೇಮರಾಜ್ ವಾನಿ (45), ಅಕ್ಷಯ್ ಹೇಮರಾಜ್ ವಾನಿ (19), ಶೇಖರ್ ಹೇಮರಾಜ್ ವಾನಿ (28), ರೇಣುಕಾ ಶೇಖರ್ ವಾನಿ (23) ಮತ್ತು ನರೇಂದ್ರ ಅಶೋಕ್ ಸಲುಂಕೆ (35) ಬಂಧನವಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಇವರಿಂದ 1ಲಕ್ಷ 90 ಸಾವಿರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.