ವರಂಗಲ್: ತೆಲಂಗಾಣದ ವರಂಗಲ್ ಜಿಲ್ಲೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ. ಆಕೆ 19 ವರ್ಷದ ಯುವತಿ.. ದುರಂತ ಎಂದರೆ ಆಕೆಯ ಹುಟ್ಟುಹಬ್ಬದಂತೆ ಆಕೆಯ ಸ್ನೇಹಿತ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆ.
ಈ ಘಟನೆಯ ಬಗ್ಗೆ ದೂರು ದಾಖಲಾದ ನಾಲ್ಕು ಗಂಟೆಯಲ್ಲಿ ವರಂಗಲ್ ಪೊಲೀಸರು ಪ್ರಕರಣ ಭೇದಿಸಿದ್ದು, ಕೊಲೆ ಮಾಡಿದ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ರಾತ್ರಿ ಯುವತಿ ದೇಹ ಹನುಕೊಂಡ ಬಳಿಯ ರಸ್ತೆಯಲ್ಲಿ ಪತ್ತೆಯಾಗಿತ್ತು.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ ಮೊದಲ ವರ್ಷದ ಪದವಿ ಓದುತ್ತಿದ್ದ ಯುವತಿ ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ದೇವಾಲಯಕ್ಕೆ ಭೇಟಿ ನೀಡಿದ್ದಳು. ಈ ವೇಳೆ ಯುವತಿಗೆ ಕಳೆದ ಆರು ತಿಂಗಳಿಂದ ಪರಿಚಿತನಾಗಿದ್ದ ಸಾಯಿ ಕುಮಾರ್, ಕರೆ ಮಾಡಿ ಕಾಜಿಪೇಟೆಗೆ ಬರುವಂತೆ ಕೇಳಿದ್ದ. ಬಳಿಕ ಅವಳನ್ನ ಕಾರಿನಲ್ಲಿ ಕುಳ್ಳಿರಿಸಿಕೊಂಡು ತೆರಳಿದ್ದಾನೆ. ಹೀಗೆ ತೆರಳುತ್ತಾ ನಿರ್ಜನ ಪ್ರದೇಶದತ್ತ ಕಾರ್ ಚಲಾಯಿಸಿದ್ದಾನೆ. ಬಳಿಕ ನಿರ್ಜನ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ.
![Telangana girl raped, murdered by friend on her birthday](https://etvbharatimages.akamaized.net/etvbharat/prod-images/5211987_t.jpg)
ವರಂಗಲ್ ಪೊಲೀಸ್ ಕಮಿಷನರ್ ವಿ ರವೀಂದ್ರ ಪ್ರಕಾರ, ಯುವತಿಯನ್ನ ಕೊಲೆ ಮಾಡಿದ ಬಳಿಕ ಸಾಯಿಕುಮಾರ್ ತನ್ನಿಬ್ಬರು ಗೆಳೆಯರಿಗೆ ಕಾಲ್ ಮಾಡಿ ಸಹಾಯ ಕೇಳಿದ್ದಾನೆ. ಆದರೆ ಅವರು ಸಹಾಯ ಮಾಡಲು ಮುಂದೆ ಬಂದಿಲ್ಲ. ಹೀಗಾಗಿ ಕತ್ತಲಾಗುವವರೆಗೆ ಕಾದ ಸಾಯಿಕುಮಾರ್ ಬಳಿಕ ಹನುಮಕೊಂಡ ರಸ್ತೆಯ ನಿರ್ಜನ ಪ್ರದೇಶದಲ್ಲಿ ಯುವತಿ ಮೃತ ದೇಹವನ್ನ ಎಸೆದು ಪರಾರಿಯಾಗಿದ್ದ. ರಾತ್ರಿ 10 ಗಂಟೆ ವೇಳೆಗೆ ಮಾಹಿತಿ ಪಡೆದ ಪೊಲೀಸರು, ನಾಲ್ಕು ಗಂಟೆಯಲ್ಲೇ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದ ಹಾಗೆ ಸಾಯಿಕುಮಾರ್ ನಮಲಿಗೊಂಡ ಗ್ರಾಮದ ನಿವಾಸಿ.