ETV Bharat / jagte-raho

ನಿಥಾರಿ ಸರಣಿ ಹತ್ಯೆ ಪ್ರಕರಣ: ಅಪರಾಧಿ ಸುರಿಂದರ್​ ಕೋಲಿಗೆ ಗಲ್ಲು ಶಿಕ್ಷೆ - ಉತ್ತರ ಪ್ರದೇಶದ ನೋಯ್ಡಾದ ನಿಥಾರಿ ಗ್ರಾಮ

ನಿಥಾರಿ ಸರಣಿ ಹತ್ಯೆ ಪ್ರಕರಣದ ಅಪರಾಧಿ ಸುರಿಂದರ್​ ಕೋಲಿಗೆ ಸಿಬಿಐ ವಿಶೇಷ‌ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.

Surendra Koli
ಸುರಿಂದರ್​ ಕೋಲಿ
author img

By

Published : Jan 16, 2021, 3:43 PM IST

ಗಾಜಿಯಾಬಾದ್‌: ನಿಥಾರಿ ಸರಣಿ ಹತ್ಯೆ ಪ್ರಕರಣ ಸಂಬಂಧ ಅಪರಾಧಿ ಸುರಿಂದರ್​ ಕೋಲಿಗೆ ಗಲ್ಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ‌ ನ್ಯಾಯಾಲಯ ತೀರ್ಪು ನೀಡಿದೆ.

2006ರ ಸರಣಿ ಹತ್ಯೆ, ಅತ್ಯಾಚಾರ-ಕೊಲೆ ಸಂಬಂಧ ಉದ್ಯಮಿ ಮೋನಿಂದರ್‌ ಸಿಂಗ್‌ ಪಂಧೇರ್​ ಹಾಗೂ ಅವರ ಸಹಾಯಕ ಸುರೀಂದರ್‌ ಕೋಲಿ ವಿರುದ್ಧ 16 ಪ್ರಕರಣಗಳು ದಾಖಲಾಗಿದ್ದವು. 12ನೇ ಕೇಸ್​ನಲ್ಲಿ ಇದೀಗ ಸುರಿಂದರ್​ ಕೋಲಿಗೆ ಮರಣದಂಡನೆ ಶಿಕ್ಷೆ ದೊರೆತಿದೆ.

ಘಟನೆ ಹಿನ್ನೆಲೆ:

2006ರಲ್ಲಿ ಉತ್ತರ ಪ್ರದೇಶದ ನೋಯ್ಡಾದ ನಿಥಾರಿ ಗ್ರಾಮದ ಇಬ್ಬರು ನಿವಾಸಿಗಳು ತಮ್ಮ ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್,​ ಅವರ ಮನೆಗೆಲಸದ ಸಿಬ್ಬಂದಿ ಸುರಿಂದರ್ ಕೋಲಿ ವಿರುದ್ಧ ಆರೋಪಿಸಿ ದೂರು ನೀಡಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಸಲು ಪೊಲೀಸರು ನಿರಾಕರಿಸಿದಾಗ ಪೋಷಕರೇ ನಾಪತ್ತೆಯಾದ ತಮ್ಮ ಮಕ್ಕಳನ್ನು ಪತ್ತೆ ಹಚ್ಚಲು ಆರಂಭಿಸಿದರು. ಈ ವೇಳೆ ನಿಥಾರಿ ಗ್ರಾಮದ ಮೋರಿಯೊಳಗಡೆ ಮಾನವ ಅವಶೇಷಗಳು ಪತ್ತೆಯಾಗಿದ್ದು, ಇದು ಕಾಣೆಯಾದ ಆರು ಜನ ಮಕ್ಕಳದ್ದು ಸೇರಿ ಹಲವರದಾಗಿತ್ತು.

Surendra Koli
ಮೋನಿಂದರ್‌ ಸಿಂಗ್ ಹಾಗೂ ಸುರಿಂದರ್​ ಕೋಲಿ

ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಈ ಪ್ರಕರಣವು ಅಂಗಾಂಗ ವ್ಯಾಪಾರ ಮತ್ತು ಮಕ್ಕಳ ಅಶ್ಲೀಲ ದಂಧೆ ಜೊತೆ ನಂಟು ಹೊಂದಿರುವುದನ್ನು ಸಿಬಿಐ ಪತ್ತೆ ಹಚ್ಚಿತ್ತು. ಕೃತ್ಯದ ಹಿಂದೆ ಮೋನಿಂದರ್ ಸಿಂಗ್ ಪಂಧೇರ್ ಹಾಗೂ ಸುರಿಂದರ್ ಕೋಲಿ ಭಾಗಿಯಾಗಿರುವುದು ಸಾಬೀತಾಗಿತ್ತು. ಕೆಲ ದಿನಗಳ ಬಳಿಕ ಮಹಿಳೆಯ ಮೇಲೆ ಈ ಆರೋಪಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದೂ ತಿಳಿದು ಬಂದಿತ್ತು. ಇಬ್ಬರು ಆರೋಪಿಗಳಿಗೂ ಸಿಬಿಐ ನ್ಯಾಯಾಲಯ 2014 ಮತ್ತು 2017ರಲ್ಲಿ 16 ಕೇಸ್​ಗಳ ಪೈಕಿ ಅನೇಕ ಪ್ರಕರಣಗಳಿಗೆ ಮರಣ ದಂಡನೆ ವಿಧಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.