ETV Bharat / jagte-raho

ಟ್ರಕ್​ ಮತ್ತು ಜೀಪ್​ ನಡುವೆ ಭೀಕರ ಅಪಘಾತ: 6 ಜನರ ದುರ್ಮರಣ - Rajasthan road accident

churu
6 ಜನರ ದುರ್ಮರಣ
author img

By

Published : Dec 7, 2020, 2:17 PM IST

Updated : Dec 7, 2020, 3:08 PM IST

14:09 December 07

ದಟ್ಟವಾದ ಮಂಜು ಆವರಿಸಿದ್ದ ಹಿನ್ನೆಲೆ ಟ್ರಕ್​ ಮತ್ತು ಜೀಪ್​ ನಡುವೆ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಚುರು (ರಾಜಸ್ಥಾನ): ಟ್ರಕ್​ ಮತ್ತು ಜೀಪ್​ ನಡುವೆ ಡಿಕ್ಕಿಯಾಗಿ ನಾಲ್ವರು ಮಹಿಳೆಯರು ಸೇರಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚುರು ಜಿಲ್ಲೆಯಲ್ಲಿ ನಡೆದಿದೆ.  

ದಟ್ಟವಾದ ಮಂಜಿನಿಂದಾಗಿ ಕಳೆದೆರಡು ದಿನಗಳಿಂದ ಚುರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ನಡೆಯುತ್ತಿವೆ. ಇಂದು ಎಂಟು ಜನರಿದ್ದ ಜೀಪ್​ಗೆ ಟೊಮೆಟೊ ತುಂಬಿದ ಟ್ರಕ್‌ ಗುದ್ದಿದೆ. ಆರು ಜನರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರದಾರ್​ ಶಹರ್​ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಇದನ್ನೂ ಓದಿ: ಅಪಘಾತವಾಗಿ ಗಂಭೀರ ಗಾಯಗೊಂಡು ನರಳಾಡಿದ ವ್ಯಕ್ತಿ : ಸಹಾಯಕ್ಕೆ ಬಾರದ ಜನ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. 

Last Updated : Dec 7, 2020, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.