ETV Bharat / jagte-raho

ಬಸ್​​ ಚಕ್ರದಡಿ ಸಿಲುಕಿ ಮಹಿಳೆ ಸಾವು... ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ - ರಸ್ತೆ ಅಪಘಾತದ ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ

ತಮಿಳುನಾಡಿನ ತಿರುಪ್ಪೂರ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದು, ಅದೃಷ್ಟವಶಾತ್​ ಅವರೊಂದಿಗಿದ್ದ ಕಂದಮ್ಮ ಪ್ರಾಣಾಪಾಯದಿಂದ ಪಾರಾಗಿದೆ.

Woman dies after being hit by rtc bus
ಬಸ್​​ ಚಕ್ರದಡಿ ಸಿಲುಕಿ ಮಹಿಳೆ ಸಾವು
author img

By

Published : Jan 9, 2021, 5:24 PM IST

ತಿರುಪ್ಪೂರ್​ (ತಮಿಳುನಾಡು): ನಿಯಂತ್ರಣ ತಪ್ಪಿದ ಬೈಕ್​ವೊಂದು ಬಸ್​ ಚಕ್ರದಡಿ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪ್ಪೂರ್​ನಲ್ಲಿ ಶುಕ್ರವಾರ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಸ್​​ ಚಕ್ರದಡಿ ಸಿಲುಕಿ ಮಹಿಳೆ ಸಾವು

ಮೃತಪಟ್ಟ ಮಹಿಳೆಯನ್ನು ಚಂದ್ರಿಕಾ (45) ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಕುಳಿತು ಚಂದ್ರಿಕಾ, ಅವರ ಮಗಳು ಶೃತಿ (25) ಹಾಗೂ ಮೊಮ್ಮಗಳು ಅಧಿರಾ ಸಂಚರಿಸುತ್ತಿದ್ದ ವೇಳೆ ಬೈಕ್​ ನಿಯಂತ್ರಣ ಕಳೆದುಕೊಂಡಿದೆ. ಅದೇ ಸಂದರ್ಭ ಪಕ್ಕದಲ್ಲಿ ಬಂದ ಆರ್‌ಟಿಸಿ ಬಸ್​ ತಗುಲಿ ಬೈಕ್​​ನಲ್ಲಿದ್ದ ಮೂವರೂ ಬಸ್​ ಕೆಳಗೆ ಬಿದ್ದಿದ್ದಾರೆ. ಚಂದ್ರಿಕಾ ಮೇಲೆ ಬಸ್​ ಹರಿದುಹೋಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಸೊಸೆ - ಮೊಮ್ಮಕ್ಕಳು ಸತ್ತ ಸುದ್ದಿ ಕೇಳಿ ಹಾರಿಹೋಯ್ತು ವೃದ್ಧೆಯ ಪ್ರಾಣಪಕ್ಷಿ

ಅದೃಷ್ಟವಶಾತ್​ ಶೃತಿ ಹಾಗೂ ಅಧಿರಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.