ETV Bharat / jagte-raho

ಬರ್ತ್​ ಡೇ ಪಾರ್ಟಿ ವೇಳೆ ಫ್ರಿಡ್ಜ್​ನಲ್ಲಿ ಅವಿತು ಎಸ್ಕೇಪ್​ ಆಗಿದ್ದ ಕುಣಿಗಲ್​ ಗಿರಿ ಅಂದರ್​​​​​! - ಕಳೆದ ವರ್ಷ ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಾರ್​​ನಲ್ಲಿ ಬರ್ತ್​ ಡೇ ಪಾರ್ಟಿ

ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ನಟೋರಿಯಸ್ ರೌಡಿಶೀಟರ್ ಕುಣಿಗಲ್ ಗಿರಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

KN_BNG_08_KUNIGAl_GERI_7204498
ಸಿಸಿಬಿ ಬಲೆಗೆ ಮತ್ತೊಬ್ಬ ರೌಡಿಶೀಟರ್, ಗ್ಯಾಂಬ್ಲಿಂಗ್ ಆಡ್ತಿದ್ದ ಕುಣಿಗಲ್ ಗಿರಿ ಅಂದರ್...!
author img

By

Published : Mar 4, 2020, 6:50 PM IST

Updated : Mar 4, 2020, 9:46 PM IST

ಬೆಂಗಳೂರು: ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ನಟೋರಿಯಸ್ ರೌಡಿಶೀಟರ್ ಕುಣಿಗಲ್ ಗಿರಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಿಸಿಬಿ ಬಲೆಗೆ ಮತ್ತೊಬ್ಬ ರೌಡಿಶೀಟರ್, ಗ್ಯಾಂಬ್ಲಿಂಗ್ ಆಡ್ತಿದ್ದ ಕುಣಿಗಲ್ ಗಿರಿ ಅಂದರ್!

ನಿನ್ನೆ ರಾತ್ರಿ ನಗರದ ಪ್ಯಾಲೇಸ್ ಮೈದಾನದಲ್ಲಿರುವ ಕಂಟ್ರಾಕ್ಟರ್ ಕ್ಲಬ್​​ನಲ್ಲಿ ಈತ ಜೂಜಾಡುತ್ತಿದ್ದನಂತೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಇನ್ಸ್​​ಪೆಕ್ಟರ್ ಶ್ರೀಧರ್ ಪೂಜಾರ್ ನೇತೃತ್ವದ ತಂಡ, ಜೂಜಾಡುತ್ತಿದ್ದ 16 ಜನರನ್ನ ವಶಕ್ಕೆ ಪಡೆದಿದೆ. ಇವರಲ್ಲಿ ರೌಡಿಶೀಟರ್​ ಕುಣಿಗಲ್ ಗಿರಿ ಸಹ ಇದ್ದು, ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಇನ್ನು ರೌಡಿ ಕುಣಿಗಲ್ ಗಿರಿ ಮೇಲೆ ಸುಮಾರು 120ಕ್ಕೂ ಹೆಚ್ಚು ಕೇಸ್​​ಗಳಿವೆಯಂತೆ. ಕೊಲೆ ಯತ್ನ, ಸುಲಿಗೆ, ದರೋಡೆ, ಬೆದರಿಕೆ ಸೇರಿ ಹಲವು ಗಂಭೀರ ಪ್ರಕರಣಗಳು ಗಿರಿ ಮೇಲೆ ದಾಖಲಾಗಿದ್ದು, ಸಿಸಿಬಿ ಪೊಲೀಸರು ಡ್ರಿಲ್ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಆರೋಪಿ ಗಿರಿ ಕಳೆದ ವರ್ಷ ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಾರ್​​ನಲ್ಲಿ ಬರ್ತ್​ ಡೇ ಪಾರ್ಟಿ ನಡೆಸುತ್ತಿದ್ದ. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿ ಬಂಧನಕ್ಕೆ ಮುಂದಾದಾಗ, ಫ್ರಿಡ್ಜ್​​​ನಲ್ಲಿ ಅವಿತುಕೊಂಡು ಬಳಿಕ ಹಿಂಬಾಗಿಲ ಮೂಲಕ ಎಸ್ಕೇಪ್ ಆಗಿದ್ದನಂತೆ.

ಬಳಿಕ ಆತನ ಪತ್ತೆಗಾಗಿ ಪೊಲೀಸರು ನಿಗಾ ವಹಿಸಿ ಕಾದು ಕುಳಿತಿದ್ದರು. ಆದ್ರೆ ಒಂದು ವರ್ಷದಿಂದ ಹಲವು ಕಡೆ ತನ್ನ ಅಬ್ಬರ ಮತ್ತೆ ಶುರು ಮಾಡಿದ್ದ ಈತ, ನಿನ್ನೆ ಕಂಟ್ರಾಕ್ಟರ್ ಕ್ಲಬ್​​ನಲ್ಲಿ ಬಲೆಗೆ ಬಿದ್ದಿದ್ದಾನೆ.

Last Updated : Mar 4, 2020, 9:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.