ETV Bharat / jagte-raho

ಬಿಹಾರದಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ - ಬಿಹಾರ ಕ್ರೈಂ ಸುದ್ದಿ

ಬಿಜೆಪಿಯ ಸ್ಥಳೀಯ ಮುಖಂಡನೋರ್ವನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಇಂದು ಬೆಳಗ್ಗೆ ನಡೆದಿದೆ.

BJP leader murder in patna
ಬಿಹಾರದಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ
author img

By

Published : Oct 1, 2020, 3:25 PM IST

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡನೋರ್ವನನ್ನು ಗನ್​ ಹಿಡಿದು ಬಂದ ಮುಸುಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮಂಡಲ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಜ್ಹಾ, ಮೃತ ಬಿಜೆಪಿ ನಾಯಕ.

ರಾಜೇಶ್ ಕುಮಾರ್ ಇಂದು ಬೆಳಗ್ಗೆ ವಾಕಿಂಗ್​ಗೆಂದು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಪಾಟ್ನಾದ ಸೀತಾರಾಮ್​ ಉತ್ಸವ್​ ಹಾಲ್​ ಬಳಿ ಗುಂಡು ಹಾರಿಸಿದ್ದಾರೆ. ಕೃತ್ಯ ಎಸಗಿ ಆರೋಪಿಗಳು ಪರಾರಿಯಾಗಿದ್ದು, ರಾಜೇಶ್ ಕುಮಾರ್​ರ ಮೃತದೇಹವನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (PMCH)ಗೆ ರವಾನಿಸಿಲಾಗಿದೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಮೃತ ರಾಜೇಶ್​ರ ಅಣ್ಣಾ ಸಂಜಯ್​ ಜ್ಹಾ, ನನ್ನ ತಮ್ಮ ಎಲ್ಲರೊಂದಿಗೂ ಸಂತಸದಿಂದ ಇರುತ್ತಿದ್ದ ವ್ಯಕ್ತಿ. ಯಾರೊಂದಿಗೂ ಈವರೆಗೆ ಜಗಳ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.