ರಾಯಚೂರು: ಶ್ರೀ ಸಾಯಿಬಾಬಾ ದೇವಾಲಯದ ಹುಂಡಿಯನ್ನ ಒಡೆದು ಹಣ ದೋಚಿರುವ ಘಟನೆ ನಗರದ ಇಂದಿರಾನಗರ ಬಡಾವಣೆ ಬಳಿ ನಡೆದಿದೆ.
ನಿನ್ನೆ ತಡರಾತ್ರಿ ಖದೀಮರು ದೇವಾಲಯದಲ್ಲಿ ಹುಂಡಿ ಒಡೆದಿದ್ದಾರೆ. ದೇವಾಲಯದ ಅಲಮಾರಿಯ ಬೀಗ ಮುರಿದು ಅದರಲ್ಲಿದ್ದ ವಸ್ತ್ರಗಳನ್ನ, ಸಾಮಾನುಗಳನ್ನ ಎಲೆಂದರಲ್ಲೆ ಬಿಸಾಡಿದ್ದಾರೆ. ಇನ್ನೂ ಭಕ್ತರು ಹಾಕುವ ಕಾಣಿಕೆಯ ಹುಂಡಿಯನ್ನ ಕಿತ್ತಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.