ರಾಯಘಡ್: ಪೊಲೀಸ್ ಪೇದೆಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದಿರುವ ಘಟನೆ ಛತ್ತೀಸ್‌ಘಡ್ ರಾಜ್ಯದ ರಾಯಘಡ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಾರ್ಚ್ 29ರಂದು ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಆದರೆ, ಈ ಘಟನೆ ಪೊಲೀಸ್ ಪೇದೆಯ ಮನೆಯಲ್ಲಿ ನಡೆದ ಕಾರಣ, ಕೃತ್ಯವೆಸಗಿರುವುದನ್ನ ನೋಡಿರುವ 45 ವರ್ಷದ ಪೊಲೀಸ್ ಪೇದೆಯ ಹೆಂಡತಿಯೇ ದೂರು ದಾಖಲು ಮಾಡಿದ್ದಾಳೆ.
ಈಗಾಗಲೇ ಆರೋಪಿ ಬಂಧನ ಮಾಡಲಾಗಿದ್ದು, ಸೆಕ್ಷನ್(376) ರೇಪ್,ಹಾಗೂ (506) ಕ್ರಿಮಿನಲ್ ಕೃತ್ಯದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, ಇದರ ಜತೆಗೆ ಪೋಕ್ಸೊ ಕಾಯ್ದೆಯಡಿ ಕೂಡ ದೂರು ದಾಖಲಾಗಿದೆ.
ಆರೋಪಿಯನ್ನ ಈಗಾಗಲೇ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, 14ದಿನದ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಅಗರವಾಲ್ ತಿಳಿಸಿದ್ದಾರೆ.