ETV Bharat / jagte-raho

ಒಳ ಉಡುಪುಗಳಲ್ಲಿ ಅಡಗಿಸಿಟ್ಟು ಚಿನ್ನ ಕಳ್ಳಸಾಗಣೆಗೆ ಯತ್ನ.. ಯುವಕ ಅರೆಸ್ಟ್​ - ಕಸ್ಟಮ್ಸ್ ಅಧಿಕಾರಿಗಳು

ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಸಿಂಗಾಪುರದಿಂದ ಬಂದ ಪ್ರಯಾಣಿಕನನ್ನು ತಿರುಚಿರಪ್ಪಲ್ಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ಬಳಿ 45.78 ಲಕ್ಷ ರೂ. ಮೌಲ್ಯದ ಸುಮಾರು 909 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

Passenger arrested at Trichy Airport for smuggling gold hidden in underwear
ಒಳ ಉಡುಪುಗಳಲ್ಲಿ ಅಡಗಿಸಿಟ್ಟು ಚಿನ್ನ ಕಳ್ಳಸಾಗಣೆಗೆ ಯತ್ನ
author img

By

Published : Dec 14, 2020, 4:56 PM IST

ತಿರುಚಿರಪ್ಪಲ್ಲಿ (ತಮಿಳುನಾಡು): ಒಳ ಉಡುಪುಗಳಲ್ಲಿ ಅಡಗಿಸಿಟ್ಟುಕೊಂಡು ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ತಮಿಳುನಾಡಿನ ತಿರುಚಿರಪ್ಪಲ್ಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಸಿಂಗಾಪುರದಿಂದ ತಿರುಚಿರಪ್ಪಲ್ಲಿಗೆ ವಿಮಾನದಲ್ಲಿ ಬಂದಿಳಿದ ಗೌತಮ್​ (25) ಎಂಬ ಪ್ರಯಾಣಿಕ ಪೇಸ್ಟ್​ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದು ತಿಳಿದು ಬಂದಿದೆ. ಈತನನ್ನು ಬಂಧಿಸಿದ ಅಧಿಕಾರಿಗಳು 45.78 ಲಕ್ಷ ರೂ. ಮೌಲ್ಯದ ಸುಮಾರು 909 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗ್ರಾ.ಪಂ. ಚುನಾವಣೆ ಅಕ್ರಮ ತಡೆಗೆ ಬಿಗಿ ಕ್ರಮ: 89 ಕಡೆ ದಾಳಿ, ಮದ್ಯ ವಶ

ಆರೋಪಿ ವಿಲ್ಲುಪುರಂ ಜಿಲ್ಲೆಯ ಸಂಗ್ರಾಪುರಂ ನಿವಾಸಿಯಾಗಿದ್ದು, ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.