ಮೈಸೂರು: ಅಕ್ರಮ ಸಂಬಂಧದ ಶಂಕೆಯಿಂದ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾರು ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಗ್ರಾಮದಲ್ಲಿ ಜರುಗಿದೆ.
ಅಂತರಸಂತೆ ಗ್ರಾಮದ ಸುನಿಲ್ (26) ಕೊಲೆಯಾದ ಚಾಲಕ. ಸುನಿಲ್ ಅದೇ ಗ್ರಾಮದ ರವಿ ಎಂಬುವವರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ. ಈ ಕುರಿತು ರವಿ ಹಾಗೂ ಸುನಿಲ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಇಂದು ಸಂಜೆ ಗ್ರಾಮದ ಬೇಕರಿಯೊಂದರಲ್ಲಿ ತಿಂಡಿ ತಿನ್ನುತ್ತಿದ್ದ ಸುನಿಲ್ನೊಂದಿಗೆ ಜಗಳ ತೆಗೆದ ರವಿ, ಮಚ್ಚಿನಿಂದ ಸುನಿಲ್ ತಲೆಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರವಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆ ಕರೆದೊಯ್ಯಲಾಗಿದೆ. ಆದರೆ ಅಷ್ಟರೊಳಗಾಗಲೇ ಸುನಿಲ್ ಮೃತಪಟ್ಟಿದ್ದ.
ಘಟನೆ ಬಳಿಕ ರವಿ ಪರಾರಿಯಾಗಿದ್ದು, ಹೆಚ್.ಡಿ.ಕೋಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.