ETV Bharat / jagte-raho

ಟಿಆರ್‌ಪಿ ಹಗರಣ : ರಿಪಬ್ಲಿಕ್ ಟಿವಿ ಸಿಇಒ ಖನ್‌ಚಂದಾನಿ ಅರೆಸ್ಟ್​

author img

By

Published : Dec 13, 2020, 12:40 PM IST

ನಕಲಿ ಟಿಆರ್‌ಪಿ ಹಗರಣ ಸಂಬಂಧ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್‌ಚಂದಾನಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದೆಂದು ತಿಳಿಸಿದ್ದಾರೆ..

Mumbai Police
ಮುಂಬೈ ಪೊಲೀಸರು

ಮುಂಬೈ (ಮಹಾರಾಷ್ಟ್ರ): ನಕಲಿ ಟಿಆರ್‌ಪಿ ಹಗರಣ ಸಂಬಂಧ ಇದೀಗ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್‌ಚಂದಾನಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ)ನಲ್ಲಿ ವಂಚನೆ ಆರೋಪದಡಿ ಖನ್‌ಚಂದಾನಿಯನ್ನು ಮುಂಬೈ ಪೊಲೀಸರು ಈ ಹಿಂದೆ ವಿಚಾರಣೆಗೊಳಪಡಿಸಿದ್ದರು. ಇದೀಗ ಅರೆಸ್ಟ್ ಮಾಡಿದ್ದು, ಖನ್‌ಚಂದಾನಿಯನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ರಿಪಬ್ಲಿಕ್ ಟಿವಿ ಸೇರಿದಂತೆ ಕೆಲ ಚಾನಲ್​ಗಳು ಟಿಆರ್‌ಪಿಯಲ್ಲಿ ವಂಚನೆ ನಡೆಸಿವೆ ಎಂದು ಬ್ರಾಡ್​ಕಾಸ್ಟ್​ ಆಡಿಯನ್ಸ್ ರಿಸರ್ಚ್​ ಕೌನ್ಸಿಲ್​ ಇಂಡಿಯಾ ಆರೋಪಿಸಿ ಕೇಸ್​ ದಾಖಲಿಸಿತ್ತು. ವೀಕ್ಷಕರ ಡೇಟಾವನ್ನು ಸಂಗ್ರಹಿಸಲು ಮೀಟರ್ ಸ್ಥಾಪಿಸಲಾದ ಕೆಲವು ಮನೆಗಳಲ್ಲಿ ನಿರ್ದಿಷ್ಟ ಚಾನೆಲ್‌ಗೆ ಟ್ಯೂನ್ ಮಾಡಲು ಲಂಚ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಜಾಹೀರಾತುದಾರರಿಗೆ ಆಮಿಷವೊಡ್ಡಲು, ಟಿಆರ್‌ಪಿ ಹೆಚ್ಚಿಸಿಕೊಳ್ಳಲು ವಂಚನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಟಿಆರ್‌ಪಿ ರೇಟಿಂಗ್ ಹಗರಣ: ಮನಿ ಲಾಂಡರಿಂಗ್ ದೂರು ದಾಖಲಿಸಿದ ಇಡಿ

ಹಗರಣ ಸಂಬಂಧ ಈ ಹಿಂದೆ ಬಂಧನವಾಗಿದ್ದ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​ನ ವಿತರಣಾ ವಿಭಾಗದ ಮುಖ್ಯಸ್ಥ ಘಾನ್​ಶ್ಯಾಮ್ ಸಿಂಗ್​​ಗೆ ಡಿಸೆಂಬರ್ 5ರಂದು ನ್ಯಾಯಾಲಯ ಜಾಮೀನು ನೀಡಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಘಾನ್​ಶ್ಯಾಮ್, ವಿಚಾರಣೆ ವೇಳೆ ಮುಂಬೈ ಪೊಲೀಸರು ನನಗೆ ಚಿತ್ರಹಿಂಸೆ ನೀಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಬಾಂಬೆ ಹೈಕೋರ್ಟ್​ಗೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್ ಅರ್ಜಿ ಸಲ್ಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.