ETV Bharat / jagte-raho

ಏಕಾದಶಿಯಂದೇ ದುರ್ಘಟನೆ: ನದಿ ಪೂಜೆಗೆ ತೆರಳಿದ್ದ ತಾಯಿ, ಮೂವರು ಮಕ್ಕಳು ನೀರುಪಾಲು - ಮಹಾರಾಷ್ಟ್ರ ಕ್ರೈಂ ಸುದ್ದಿ

ಏಕಾದಶಿ ಹಿನ್ನೆಲೆ ನದಿ ಪೂಜೆಗೆಂದು ತೆರಳಿದ್ದ ತಾಯಿ ಹಾಗೂ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮಕ್ಕಳ ರಕ್ಷಣೆಗೆ ನೀರಿಗಿಳಿದ ಇತರ ಮೂವರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.

Mother drowned along with three children
ನದಿ ಪೂಜೆಗೆಂದು ತೆರಳಿದ್ದ ತಾಯಿ, ಮೂವರು ಮಕ್ಕಳು ನೀರುಪಾಲು
author img

By

Published : Sep 27, 2020, 1:40 PM IST

ಅಮರಾವತಿ(ಮಹಾರಾಷ್ಟ್ರ): ನದಿ ಪೂಜೆಗೆಂದು ತೆರಳಿದ್ದ ತಾಯಿ ಹಾಗೂ ಅವರ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮಕ್ಕಳನ್ನು ಯಶ್ ಚಾವ್ರೆ (13), ಜೀವನ್ ಚಾವ್ರೆ (14), ಸೋಹಮ್ ಚಾವ್ರೆ (12) ಹಾಗೂ ತಾಯಿಯನ್ನು ಪುಷ್ಪಾ ಚಾವ್ರೆ ಎಂದು ಗುರುತಿಸಲಾಗಿದೆ.

ನದಿ ಪೂಜೆಗೆಂದು ತೆರಳಿದ್ದ ತಾಯಿ, ಮೂವರು ಮಕ್ಕಳು ನೀರುಪಾಲು

ಇಂದು ಏಕಾದಶಿ ಹಿನ್ನೆಲೆ ನಾಲ್ವರು ಅಮರಾವತಿ ಜಿಲ್ಲೆಯ ಧಮಂಗಾಂವ್ ತಾಲೂಕಿನಲ್ಲಿರುವ ನದಿಯೊಂದಕ್ಕೆ ಪೂಜೆ ಮಾಡಲು ತೆರಳಿದ್ದ ವೇಳೆ ಘಟನೆ ನಡೆದಿದೆ. ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಆಳದ ಬಗ್ಗೆ ಅವರ ಗಮನಕ್ಕೆ ಬಾರದ ಕಾರಣ ಅವಘಡ ಸಂಭವಿಸಿದೆ.

ಈ ದೃಶ್ಯವನ್ನು ಕಂಡ ಇತರ ಮೂವರು ಮಹಿಳೆಯರು ಮಕ್ಕಳನ್ನು ರಕ್ಷಿಸಲು ಹೋಗಿದ್ದು, ಅವರ ಸ್ಥಿತಿ ಕೂಡ ಗಂಭೀರವಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.