ಚನ್ನರಾಯಪಟ್ಟಣ: ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತದಿಂದ ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ತಾಲೂಕಿನಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಬಾಗುರು ಸಮೀಪದ ಗೋವಿನಕೆರೆಯ ನಿವಾಸಿ ಪವನ್ (27) ಎಂಬುವ ಯುವಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆಗಸ್ಟ್ 5ರಂದು ಬಾಗೂರಿನಲ್ಲಿ ಪವನ್‌ಗೆ ಆನಂದ್ ಮತ್ತು ರವಿ ಎಂಬುವವರು ಚಾಕು ಹಾಕಿದ್ದರು ಎನ್ನಲಾಗುತ್ತಿದೆ.
ಮದ್ಯದ ಅಂಗಡಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಪವನ್, ಚಾಕು ಹಿರಿತಕ್ಕು ಮುನ್ನ ಕ್ಷುಲ್ಲಕ ಕಾರಣಕ್ಕೆ ಆನದ್ ಜೊತೆಗೆ ಜಗಳವಾಡಿದ್ದ. ಉಚಿತವಾಗಿ ಎಣ್ಣೆ ನೀಡಬೇಕು. ಇಲ್ಲದಿದ್ದರೆ ನಮ್ಮ ಬಾಸ್ ಗಮನಕ್ಕೆ ತರುತ್ತೇನೆ ಎಂದು ಆನಂದ್ ಆವಾಜ್ ಹಾಕಿದ್ದ. ಇದಕ್ಕೆ ಪವನ್ ನಿರಾಕರಿಸಿದ್ದ ಎಂದು ಹೇಳಲಾಗುತ್ತದೆ.
ಅಯೋಧ್ಯೆ ರಾಮಮಂದಿರ ಶಿಲಾನ್ಯಾಸದ ಪ್ರಯುಕ್ತ ಜಿಲ್ಲಾಡಳಿತ ಮದ್ಯದಂಗಡಿ ಬಂದ್ ಮಾಡಲು ಆದೇಶಿಸಿತ್ತು. ಬಾಗೂರಿನ ಡಾಬಾ ಬಳಿ ಸಿಕ್ಕ ಪವನ್‌ಗೆ, ಅಂಗಡಿ ಬಾಗಿಲು ತೆಗೆದು ಮದ್ಯ ಕೊಡವಂತೆ ಆನಂದ್ ಗದರಿಸಿದ್ದ. ಇದನ್ನು ನಿರಾಕರಿಸಿ, ಅಂಗಡಿ ತೆಗೆಯುವುದಿಲ್ಲ ಎಂದು ಪವನ್ ಪ್ರತಿಕ್ರಿಯಿಸಿದ್ದ. ಈ ಸಂಬಂಧ ಇಬ್ಬರ ನಡುವೆ ನಡೆದ ಗಲಾಟೆಯಲ್ಲಿ ಏಕಾಏಕಿ ಆನಂದ್ ಮತ್ತು ರವಿ ಚಾಕು ತೆಗೆದು ಪವನ್ ಅವರ ಹೊಟ್ಟೆ ಭಾಗಕ್ಕೆ ಚುಚ್ಚಿ ಪರಾರಿ ಆಗಿದ್ದಾರೆ ಎನ್ನಲಾಗುತ್ತಿದೆ.
ತೀವ್ರ ಗಾಯಗೊಂಡು ಕುಸಿದು ಬಿದ್ದ ಪವನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಚನ್ನರಾಯಪಟ್ಟಣದಲ್ಲಿ ನಾಲ್ಕು ಕೊಲೆ ಪ್ರಕರಣ ದಾಖಲುಗಿವೆ. ಈ ನಡುವೆ ಪಿಎಸ್‌ಐ ಕಿರಣ್ ಕುಮಾರ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.