ಉಳ್ಳಾಲ: ಸೊಸೈಟಿಯಲ್ಲಿ ಡೆಪಾಸಿಟ್ ಹಣವನ್ನು ಇಟ್ಟಿರುವುದಾಗಿ ನಂಬಿಸಿ ಮಹಿಳೆಯೋರ್ವರಿಗೆ 10 ಲಕ್ಷ ರೂ. ವಂಚಿಸಿದ ಯುವಕನನ್ನು ತೊಕ್ಕೊಟ್ಟು ಬಳಿ ಹಿಡಿದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ತೊಕ್ಕೊಟ್ಟುವಿನಲ್ಲಿ ಮೆಡಿಕಲ್ ಅಂಗಡಿ ಹೊಂದಿರುವ ಮಂಗಳ ಎಂಬವರಿಗೆ ಹಣ ವಂಚಿಸಿರುವ ಆರೋಪದಡಿ ಕುಡುಪು ನಿವಾಸಿ ಸುಧೀರ್ ಎಂಬಾತನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಲಾಗಿದೆ.
ಮಹಿಳೆ 2017ರಲ್ಲಿ ಕುಡುಪು ಬಳಿಯ ಸೇವಾ ಸಹಕಾರಿ ಸಂಘದಲ್ಲಿ ರೂ. 10 ಲಕ್ಷ ಡೆಪಾಸಿಟ್ ಹಣವನ್ನು ಇಡಲು ಸುಧೀರ್ ಬಳಿ ನೀಡಿದ್ದರು. ಇಟ್ಟ ಹಣದ ದಾಖಲೆಗಳನ್ನು ಮಹಿಳೆ ಪಡೆದಿದ್ದರು. ಆದರೆ ಕಳೆದ ಒಂದು ವರ್ಷದಿಂದ ಡೆಪಾಸಿಟ್ ಹಣವನ್ನು ಮರುಪಾವತಿಸುವಂತೆ ಮಹಿಳೆ , ಸುಧೀರ್ ಅವರಲ್ಲಿ ಹೇಳುತ್ತಿದ್ದರೂ, ವಾಪಸ್ಸುನೀಡುವ ಪ್ರಯತ್ನ ಮಾಡಿರಲಿಲ್ಲ.
ಇತ್ತೀಚೆಗೆ ಮಹಿಳೆಯಿಂದ ತಪ್ಪಿಸಿಕೊಂಡಿದ್ದರು. ಸೋಮವಾರದಂದು ಸುಧೀರ್ ನನ್ನು ಉಪಾಯವಾಗಿ ತನ್ನ ಮೆಡಿಕಲ್ ಅಂಗಡಿಗೆ ಕರೆಸಿದ್ದ ಮಹಿಳೆ, ಅಲ್ಲೇ ಕೂಡಿಹಾಕಿ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಉಳ್ಳಾಲ ಪೊಲೀಸರು ಸುಧೀರ್ ನನ್ನು ಠಾಣೆಯಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದಾರೆ. ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ದಾವಣಗೆರೆ: ಲಾರಿ ಹರಿದು ತುಂಡಾದ ಬಾಲಕನ ಕಾಲು