ETV Bharat / jagte-raho

ರಾಜಸ್ಥಾನ ಸಿಎಂಗೆ ಜೀವ ಬೆದರಿಕೆ: ಆರೋಪಿ ಲೋಕೇಶ್ ಕುಮಾರ್ ಬಂಧನ

ರಾಜಸ್ಥಾನ್ ಪೊಲೀಸರಿಗೆ ಸಿಎಂ ಬೆದರಿಕೆ ಸಂದೇಶದ ಕರೆಯೊಂದು ಗುರುವಾರ ಬಂದಿತ್ತು. ರಾಜಸ್ಥಾನ್ ಪೊಲೀಸರ ಇಂಟಿಗ್ರೇಟೆಡ್​ ತುರ್ತು ಪ್ರತಿಕ್ರಿಯೆ ಕೇಂದ್ರದ ಸಾಮಾಜಿಕ ಮಾಧ್ಯಮ ಸೆಲ್​ಗೆ ಗುರುವಾರ ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಬಾಂಬ್​ನಿಂದ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

Arrest
ಬಂಧನ
author img

By

Published : Jul 10, 2020, 11:54 PM IST

ಜೈಪುರ್​: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಲೋಕೇಶ್​ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ್ ಪೊಲೀಸರಿಗೆ ಸಿಎಂ ಅವರನ್ನು ಕೊಲ್ಲುವ ಬೆದರಿಕೆ ಸಂದೇಶ ಬಂದಿತ್ತು. ರಾಜಸ್ಥಾನ್ ಪೊಲೀಸರ ಇಂಟಿಗ್ರೇಟೆಡ್​ ತುರ್ತು ಪ್ರತಿಕ್ರಿಯೆ ಕೇಂದ್ರದ ಸಾಮಾಜಿಕ ಮಾಧ್ಯಮ ಸೆಲ್​ಗೆ ಗುರುವಾರ ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಬಾಂಬ್​ನಿಂದ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ದಕ್ಷಿಣ ಜೈಪುರದ ಡಿಸಿಪಿ ಮನೋಜ್ ಕುಮಾರ್ ಈಟಿವಿ ಭಾರತ ಜೊತೆ ಮಾತನಾಡಿ, ರಾಜಸ್ಥಾನ್ ಸಿಎಂ ಗೆಹ್ಲೋಟ್ ಅವರನ್ನು ಬಾಂಬ್ ಬಳಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಪಾಪಡ್​ಗಾಂವನಿಂದ ಲೋಕೇಶ್ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ. ಜುಲೈ 9ರಂದು ಜೈಪುರದಲ್ಲಿ ಜಮ್ವರಮ್‌ಗಢ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.

ನಾವು ತಂತ್ರಜ್ಞಾನ ಮತ್ತು ವಿವೇಚನಾ ಶಕ್ತಿ ಬಳಿ ಆರೋಪಿಯನ್ನು ಪತ್ತೆ ಹಚ್ಚಿದ್ದೇವೆ. ಬಂಧಿತ ಆರೋಪಿ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಯಾಗಿದ್ದಾನೆ. ಆತನ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ಆತನ ಕಾರ್ಯಗಳು ತಮಾಷೆಯಂತೆ ತೋರುತ್ತವೆ. ತಮ್ಮ ಸೆಲ್ ಫೋನ್‌ನಿಂದ ರಾಜಸ್ಥಾನ್ ಪೊಲೀಸರಿಗೆ ಮಾಡಿದ ಕರೆಯಲ್ಲಿ ಬೆದರಿಕೆ ಹಾಕಿದ್ದಾನೆ. ಸೋಷಿಯಲ್ ಮೀಡಿಯಾ ಹೆಲ್ಪ್‌ಡೆಸ್ಕ್ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.