ETV Bharat / jagte-raho

ಆಸ್ತಿ ವಿವಾದ: ಉತ್ತರ ಪ್ರದೇಶದಲ್ಲಿ ಅರ್ಚಕನಿಗೆ ಗುಂಡಿಕ್ಕಿದ ದುಷ್ಕರ್ಮಿಗಳು

ಉತ್ತರ ಪ್ರದೇಶದ ಗೊಂಡ ಜಿಲ್ಲೆಯಲ್ಲಿನ ರಾಮ​ಜಾನಕಿ ದೇಗುಲದ ಅರ್ಚಕನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಅರ್ಚಕನ ಪರಿಸ್ಥಿತಿ ಗಂಭೀರವಾಗಿದೆ.

Uttar Pradesh
ಉತ್ತರ ಪ್ರದೇಶದಲ್ಲಿ ಅರ್ಚಕನಿಗೆ ಗುಂಡಿಕ್ಕಿದ ದುಷ್ಕರ್ಮಿಗಳು
author img

By

Published : Oct 11, 2020, 12:48 PM IST

ಗೊಂಡ (ಉತ್ತರ ಪ್ರದೇಶ): ಆಸ್ತಿ ವಿವಾದ ಹಿನ್ನೆಲೆ ದೇವಸ್ಥಾನದ ಅರ್ಚಕನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಗೊಂಡ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಗುಂಡಿನ ದಾಳಿಗೆ ಒಳಗಾದ ರಾಮ​ಜಾನಕಿ ದೇಗುಲದ ಅರ್ಚಕ ಸಾಮ್ರಾಟ್​ ದಾಸ್​ರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಲಖನೌನ ಆಸ್ಪತ್ರೆಗೆ ಸ್ಥಳಾಂತರ​ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಗೊಂಡ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಮೊನ್ನೆಯಷ್ಟೇ ಭೂವಿವಾದ ಹಿನ್ನೆಲೆ ದೇವಾಲಯದ ಅರ್ಚಕನನ್ನು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.