ETV Bharat / jagte-raho

ಒಂಟಿ ಮಹಿಳೆ ಮನೆಗೆ ನುಗ್ಗಿ ದರೋಡೆ: ಖದೀಮರನ್ನು ಬಂಧಿಸಿದ ಪೊಲೀಸರು - ಮಹಾದೇವಪುರ ನಿವಾಸಿ ಒಂಟಿ ಮಹಿಳೆ ‌ನಾಗರತ್ನಮ್ಮ

ಮಹಾದೇವಪುರ ನಿವಾಸಿ ಒಂಟಿ ಮಹಿಳೆ ‌ನಾಗರತ್ನಮ್ಮ ಎಂಬುವರ ಮನೆಗೆ 2020ರ ಆಗಸ್ಟ್ 20ರಂದು ನುಗ್ಗಿದ ಇಬ್ಬರು ಯುವಕರು, ಚಾಕು ತೋರಿಸಿ 17 ಸಾವಿರ ರೂ. ನಗದು, 25 ಗ್ರಾಂ ತೂಕದ ಚಿನ್ನಾಭರಣ ಕಿತ್ತುಕೊಂಡಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ.

accused arrested in mysuru news
ಒಂಟಿ ಮಹಿಳೆ ಮನೆಗೆ ನುಗ್ಗಿ ದರೋಡೆ
author img

By

Published : Feb 2, 2021, 4:42 PM IST

ಮೈಸೂರು: ನೀರು ಕೇಳುವ ನೆಪದಲ್ಲಿ ಒಂಟಿ ಮಹಿಳೆ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಓದಿ: 2ಎ, ಎಸ್‌ಟಿ ಮೀಸಲಾತಿ ಸದ್ದು.. ಸರ್ಕಾರದ ವಿರುದ್ಧವೇ ಸಿಡಿದೆದ್ದ ಆಡಳಿತ ಪಕ್ಷದ ಶಾಸಕರು..

ಜಯಪುರ ಹೋಬಳಿಯ ಕೆ.ಸಾಲುಂಡಿ ಗ್ರಾಮದ ಶಿವಕುಮಾರ್ (30), ಶಾರದಾದೇವಿ ನಗರದ ಹರೀಶ್ ಯಾದವ್ (23) ಬಂಧಿತರು. ಬಂಧಿತರಿಂದ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಒಂದು ಆಕ್ಟೀವಾ ಹೋಂಡಾ, 2 ಮೊಬೈಲ್, ಒಂದು ಚಾಕು, ಒಂದು‌ ಮಚ್ಚು ಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿನ 3 ಪ್ರಕರಣಗಳು ಪತ್ತೆಯಾಗಿದೆ.

ಮಹಾದೇವಪುರ ನಿವಾಸಿ ಒಂಟಿ ಮಹಿಳೆ ‌ನಾಗರತ್ನಮ್ಮ ಎಂಬುವರ ಮನೆಗೆ 2020ರ ಆಗಸ್ಟ್ 20ರಂದು ನುಗ್ಗಿದ್ದ ಇಬ್ಬರು ಯುವಕರು, ಚಾಕು ತೋರಿಸಿ 17 ಸಾವಿರ ರೂ. ನಗದು, 25 ಗ್ರಾಂ ತೂಕದ ಚಿನ್ನಾಭರಣ ಕಿತ್ತುಕೊಂಡಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ನಂತರ ನೊಂದ ಮಹಿಳೆ ಪೊಲೀಸರ ಭರವಸೆ ಮೇರೆಗೆ 2020ರ ಸೆಪ್ಟೆಂಬರ್ 9ರಂದು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪೊಲೀಸ್ ಸಿಬ್ಬಂದಿ ನಿನ್ನೆ (2021 ಫೆ‌. 1) ಗಸ್ತಿನಲ್ಲಿದ್ದಾಗ ಚಾಮುಂಡಿವನಂ ಬಳಿ ಇರುವ ಗಿರವಿ ಅಂಗಡಿ ಹತ್ತಿರ ಅನುಮಾನಾಸ್ಪದವಾಗಿ ನಿಂತಿದ್ದ ಶಿವಕುಮಾರ್‌ ಹಾಗೂ ಹರೀಶ್ ಯಾದವ್​ನನ್ನು ವಶಕ್ಕೆ ಪಡೆದು, ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಿದ್ದಾರೆ. ‌ಮಹದೇವಪುರದ ನಿವಾಸಿ ನಾಗರತ್ನಮ್ಮ ಅವರಿಗೆ ಹೆದರಿಸಿ, ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಅಂದು ಘಟನೆಯಲ್ಲಿ ಪಾಲ್ಗೊಂಡಿದ್ದ ಶರತ್, ಸುನಿಲ್ ಕುಮಾರ್, ಶಶಾಂಕ್, ಕಾರ್ತಿಕ್ ಎಂಬುವರ ಹೆಸರಗಳನ್ನು ಹೇಳಿದ್ದಾರೆ. ‌ಪ್ರಕರಣವೊಂದರಲ್ಲಿ ಈಗಾಗಲೇ ಬಂಧಿಯಾಗಿರುವ ಶರತ್ ನ್ಯಾಯಾಂಗ ಬಂಧನದಲ್ಲಿದ್ದರೆ, ಇನ್ನುಳಿದ ಸುನೀಲ್ ಕುಮಾರ್, ಶಶಾಂಕ್,‌ ಕಾರ್ತಿಕ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ಮಾಧ್ಯಮಗಳಿಗೆ ವಿವರಣೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.