ETV Bharat / jagte-raho

ಸಹೋದ್ಯೋಗಿ ಮೇಲಿನ ಕಿರುಕುಳ ತಡೆಯಲೆತ್ನಿಸಿ ಹಲ್ಲೆಗೊಳಗಾಗಿದ್ದ ಪತ್ರಕರ್ತ ಸಾವು - ಜೈಪುರದಲ್ಲಿ ವಿಡಿಯೋ ಜರ್ನಲಿಸ್ಟ್​ ಸಾವು

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ ಸಾವನ್ನಪ್ಪಿದ್ದಾರೆ.

Journalist dies
ಸಹೋದ್ಯೋಗಿ ಮೇಲಿನ ಕಿರುಕುಳ ತಡೆಯಲೆತ್ನಿಸಿ ಹಲ್ಲೆಗೊಳಗಾಗಿದ್ದ ಪತ್ರಕರ್ತ ಸಾವು
author img

By

Published : Dec 25, 2020, 5:57 PM IST

ಜೈಪುರ (ರಾಜಸ್ಥಾನ): ತನ್ನ ಮಹಿಳಾ ಸಹೋದ್ಯೋಗಿ ಮೇಲೆ ನಡೆಯುತ್ತಿದ್ದ ಕಿರುಕುಳವನ್ನು ತಡೆಯಲು ಯತ್ನಿಸಿದ್ದಕ್ಕೆ ಹಲ್ಲೆಗೊಳಗಾಗಿದ್ದ ರಾಜಸ್ಥಾನದ ಜೈಪುರದ ಪತ್ರಕರ್ತ ಇಂದು ಮೃತಪಟ್ಟಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ವಿಡಿಯೋ ಜರ್ನಲಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಸೋನಿ ಮೃತಪಟ್ಟ ಪತ್ರಕರ್ತರಾಗಿದ್ದಾರೆ.

ಡಿಸೆಂಬರ್ 8ರ ರಾತ್ರಿ ಪತ್ರಕರ್ತ ಅಭಿಷೇಕ್ ಸೋನಿ ಸ್ನೇಹಿತೆ - ಸಹೋದ್ಯೋಗಿ ಜೊತೆ ಪುಂಡರ ಗುಂಪೊಂದು ಅಸಭ್ಯವಾಗಿ ವರ್ತಿಸಿದ್ದರು. ಅಲ್ಲದೇ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಇದನ್ನು ತಡೆಯಲು ಹೋದ ಅಭಿಷೇಕ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್​ರನ್ನು ಜೈಪುರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದನ್ನೂ ಓದಿ: ಮಹಿಳೆಯ ರಕ್ಷಿಸಲು ಹೋದ ಪತ್ರಕರ್ತನ ಮೇಲೆ ಹಲ್ಲೆ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.