ದೊಡ್ಡಬಳ್ಳಾಪುರ: ನಂದಿ ಬೆಟ್ಟದ ತಪ್ಪಲಿನ ಹೋಟೆಲ್ವೊಂದರಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಎರಡು ತಂಡಗಳ ಮೇಲೆ ದಾಳಿ ನಡೆಸಿದ ಪೊಲೀಸರು ಜೂಜುಕೋರರನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ನ 'ಓಯಾ ಗೇಟ್ ವೇ' ಹೋಟೆಲ್ನಲ್ಲಿ ಅಕ್ರಮವಾಗಿ ಇಸ್ಪೀಟ್ ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಹೋಟೆಲ್ನ ಎರಡು ರೂಮ್ಗಳಲ್ಲಿ ಇಸ್ಪೀಟ್ ಆಡುತ್ತಿದ್ದ 24 ಜೂಜುಕೋರರನ್ನು ಬಂಧಿಸಿದ್ದಾರೆ.
ಆಂಧ್ರದಿಂದ ಬಂದಿದ್ದ ಜೂಜುಕೋರರು ಇಸ್ಪೀಟ್ ದಂಧೆಯಲ್ಲಿ ಹಣ ಹಾಕಿದ್ದರು. ಹೋಟೆಲ್ ಮಾಲೀಕ ಮುನೇಗೌಡ ಸೇರಿದಂತೆ ತಿರುಮಲ, ಕೋಟಿ ಲಿಂಗಪ್ಪ, ಈರಣ್ಣ ಗೌಡ, ರವಿ ಕುಮಾರ್, ಬಾಬು, ಶ್ರೀನಿವಾಸ್, ಪ್ರಕಾಶ್ ಪಥೀನಿಟಿ, ಅನಿಲ್ ಕುಮಾರ್, ರಾಮಚಂದ್ರ, ಚಂದ್ರಶೇಖರ್, ಸುದೇಶ್ ಕೆಸಿ ಎಂಬುವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರಾಣೆಬೆನ್ನೂರಲ್ಲಿ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ!
ಇದರ ಜೊತೆ ಮತ್ತೊಂದು ರೂಮ್ನಲ್ಲಿ ಜೂಜಾಡುತ್ತಿದ್ದ ಛಲಪತಿ, ನರಸಿಂಹಲು, ಮಹಮ್ಮದ್ ಅಸ್ವಕ್, ವೆಂಕಟ ಶಿವರೆಡ್ಡಿ, ಶ್ರೀಧರ್, ಮಹಮ್ಮದ್ ಗೌಸ್, ರಾಬೊಂಜಿ ನಾಯಕ್, ಚಂದ್ರಶೇಖರ್, ಜಗದೀಶ್, ರವಿಚಂದ್ರ, ಶ್ರೀನಿವಾಸ್, ನಿರಂಜನ್ ಮತ್ತು ಮಂಜುನಾಥ್ ಎಂಬುವರನ್ನೂ ಬಂಧಿಸಲಾಗಿದೆ.
ಬಂಧಿತರಿಂದ ಬ್ರೀಜಾ, ಸ್ವಿಫ್ಟ್ ಡಿಸೈರ್, ಹೋಂಡಾ ಅಮೇಜ್, ಇಟಿಯಸ್, ಬೊಲೆರೊ, ಸ್ವಿಫ್ಟ್ ಕಾರುಗಳು ಹಾಗೂ 2,26,320 ರೂ. ವಶಕ್ಕೆ ಪಡೆದಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.