ರಾಯಚೂರು: ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಿಯಾಗುತ್ತಾಳೆಂದು ಹೆಂಡತಿಯನ್ನು ಕತ್ತು ಹಿಸುಕಿ ಗಂಡ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ನಡೆದಿದೆ.
ಶಂಕ್ರಮ್ಮ(22) ಕೊಲೆಯಾದ ದುರ್ದೈವಿ. ಶಂಕ್ರಮ್ಮ ಹಾಗೂ ನಾಗರಾಜ ಇಬ್ಬರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದ್ರೆ ನಾಗರಾಜ್ ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಕುರಿತು ಆರೋಪಿ ನಾಗರಾಜ್ ನನ್ನು ಬಂಧಿಸಿದ್ದು, ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.