ಅಹಮದಾಬಾದ್: ಅಪರಾಧ ತನಿಖಾ ವಿಭಾಗ (ಸಿಐಡಿ) ಹಾಗೂ ಅಹಮದಾಬಾದ್ ರೈಲ್ವೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದಾಗಿ ಮಾನವ ಕಳ್ಳಸಾಗಣೆಯ ದೊಡ್ಡ ಜಾಲವೊಂದು ಬಯಲಾಗಿದೆ.
ಅಜಿಮಾಬಾದ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಿಹಾರದಿಂದ ಸಾಗಿಸಲಾಗುತ್ತಿದ್ದ 32 ಅಪ್ರಾಪ್ತರನ್ನು ಗುಜರಾತ್ನ ಅಹಮದಾಬಾದ್ ರೈಲ್ವೆ ನಿಲ್ದಾಣದಲ್ಲಿ ರಕ್ಷಿಸಲಾಗಿದೆ.
ಸಂತ್ರಸ್ತರು 13 ರಿಂದ 17 ವರ್ಷ ನಡುವಿನ ಮಕ್ಕಳಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.