ಮೈಸೂರು: ಮನೆಗಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸಿರುವ ಉದಯಗಿರಿ ಪೊಲೀಸರು ಅವರಿಂದ ಕಳ್ಳತನ ಮಾಡಿದ ಚಿನ್ನಾಭರಣ ಮತ್ತು ಕಳ್ಳತನಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಸೈಯದ್ ಅಲೀಂ (33), ಉಮರ್ ಪಾಷಾ (27) ಹಾಗೂ ವಾಸೀಂ ಪಾಷಾ ಬಂಧಿತ ಆರೋಪಿಗಳು.
ಮೂವರು ಖದೀಮರು ಜೊತೆಗೂಡಿ ಯಾರೂ ಇಲ್ಲದ ಮನೆಗೆ ನುಗ್ಗಿ ಚಿನ್ನಾಭರಣ, ವಜ್ರ, ಬೆಳ್ಳಿ ವಸ್ತುಗಳನ್ನು ಕದಿಯುತ್ತಿದ್ದರು. ವಿದ್ಯಾಶಂಕರ ಬಡಾವಣೆಯಲ್ಲಿ ಆಟೋ-ರಿಕ್ಷಾದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದ್ದನ್ನು ಕಂಡ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳು ಕದ್ದ ವಸ್ತುಗಳನ್ನು ಮಂಜುನಾಥ್ ಹಾಗೂ ಆದಿಲ್ ಪಾಷಾ ಎಂಬುವವರಿಗೆ ಮಾರಾಟ ಮಾಡುತ್ತಿದ್ದರು. ಇವರಿಂದ ಹುಣಸೂರು ಮೂಲದ ದೇವೇಂದ್ರ ಸಿಂಗ್ ಎಂಬಾತ ಖರೀದಿಸುತ್ತಿದ್ದನು. ಇವರನ್ನು ವಿವಾರಣೆ ಮಾಡಿದ ಪೊಲೀಸರು ಬಂಧಿತರಿಂದ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.