ಕೋಯಿಕ್ಕೋಡ್ (ಕೇರಳ): ಬೆಳ್ಳಂ ಬೆಳಗ್ಗೆಯೇ ನವವಿವಾಹಿತ ಹಾಗೂ ಆತನ ಸ್ನೇಹಿತರ ಮೇಲೆ ಎಂಟು ಜನರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಕೇರಳದ ಕೋಯಿಕ್ಕೋಡ್ನಲ್ಲಿ ನಡೆದಿದೆ.
ಕುಟುಂಬಸ್ಥರ ತೀವ್ರ ವಿರೋಧದ ನಡುವೆ ಪ್ರೀತಿಸಿದ ಯುವತಿ ಜೊತೆ ಮೊಹಮ್ಮದ್ ಸ್ವಾಲಿಹ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಗುರುವಾರ ತನ್ನ ಗೆಳೆಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಸ್ವಾಲಿಹ್ನನ್ನು ಕೋಯಿಕ್ಕೋಡ್ನ ಕೊಯಿಲಾಂಡಿಯಲ್ಲಿ ಅಡ್ಡಗಟ್ಟಿದ ಗುಂಪು ಹಲ್ಲೆ ನಡೆಸಿದೆ.
ಪತ್ನಿಯ ಚಿಕ್ಕಪ್ಪ ಕಳುಹಿಸಿದ ಗ್ಯಾಂಗ್ ಇದು ಎಂದು ಹೇಳಲಾಗಿದ್ದು, ಸ್ವಾಲಿಹ್ಗೆ ಜೀವ ಬೆದರಿಕೆ ಹಾಕಿದ್ದಾರೆ. ಸ್ಥಳೀಯರು ಸ್ವಾಲಿಹ್ ಮೇಲಿನ ಹಲ್ಲೆಯನ್ನು ತಡೆಯಲು ದೌಡಾಯಿಸಿದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಕೊಯಿಲಾಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.