ETV Bharat / jagte-raho

ಚೆನ್ನೈ ವಿಮಾನ ನಿಲ್ದಾಣದಲ್ಲಿ 38.9 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶ: ಓರ್ವನ ಬಂಧನ

author img

By

Published : Nov 3, 2020, 9:22 PM IST

ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳು ಓರ್ವ ಪ್ರಯಾಣಿಕನಿಂದ 38.9 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.

representational image
ಪ್ರಾತಿನಿಧಿಕ ಚಿತ್ರ

ಚೆನ್ನೈ: ವಿಮಾನ ನಿಲ್ದಾಣದಲ್ಲಿ ಸುಮಾರು 38.9 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ ಚೆನ್ನೈ ವಿಮಾನ ನಿಲ್ದಾಣದ ತೆರಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಆರೋಪಿಯನ್ನು ಶಾಹುಲ್ ಹಮೀದ್ (40) ಎಂದು ಗುರುತಿಸಲಾಗಿದ್ದು, ಈತ ತಮಿಳುನಾಡಿನ ಪಸಿಪತ್ತಿನಮ್​ಗೆ ಸೇರಿದವನಾಗಿದ್ದಾನೆ. ದುಬೈನಿಂದ ಇಂಡಿಗೋ ವಿಮಾನದಲ್ಲಿ ಆರೋಪಿ ಆಗಮಿಸಿದ್ದು, ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.

ನಾಲ್ಕು ಪೊಟ್ಟಣಗಳಲ್ಲಿ 850 ಗ್ರಾಂ​ ತೂಕದ ಚಿನ್ನದ ಪೇಸ್ಟ್​​ಅನ್ನು ಕಸ್ಟಮ್ಸ್​ ಆ್ಯಕ್ಟ್​​ನಲ್ಲಿ ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ 38.9 ಲಕ್ಷ ರೂಪಾಯಿಯಾಗಿದೆ.

ಸೋಮವಾರ ರಾಮನಾಥಪುರಂ ಮೂಲದ ಸಜಮ್​ಖಾನ್ ಕಲಂದರ್ ಅಯೂಬ್​​ಖಾನ್ (23) ಎಂಬಾತ ದುಬೈನಿಂದ ಇಂಡಿಗೋ ವಿಮಾನದಲ್ಲಿ ಬಂದು ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದು, ಈತನ ಬಳಿಯಿಂದ 437 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.