ETV Bharat / jagte-raho

ಮಹಾನಾಟಕವಾಡಿ ವೃದ್ಧೆಯ ಆಭರಣ ಎಗರಿಸಿದ ಕಳ್ಳ! - kannad News

ಪರ್ಸ್ ಕಳವಾಗಿದೆಯೆಂದು ಆಣೆ ಪ್ರಮಾಣದ ನಾಟಕವಾಡಿ ಕಳ್ಳನೊಬ್ಬ ವೃದ್ಧೆಯ ಚಿನ್ನದ ಆಭರಣಗಳನ್ನು ಎಗರಿಸಿದ ಘಟನೆ ಚಾಮರಾಜನಗರದ ಯಳಂದೂರಿನಲ್ಲಿ ನಡೆದಿದೆ. ಯಾಮಾರಿದ ಅಜ್ಜಿ ಆಭರಣ ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾಳೆ.

ಸಿನಿಮಾ ಸ್ಟೈಲಲ್ಲಿ ವೃದ್ಧೆಯ ಆಭರಣ ಎಗರಿಸಿದ ಕಳ್ಳ : ಕೊಟ್ಟು ಕೋಡಂಗಿಯಾದ ಅಜ್ಜಿ!
author img

By

Published : Aug 7, 2019, 10:05 AM IST

ಚಾಮರಾಜನಗರ: ಕೊಟ್ಟವ ಕೋಡಂಗಿ ಇಸ್ಕೊಂಡವ ವೀರಭದ್ರ ಎಂಬ ಗಾದೆ ಮಾತಿನಂತೆ ವೃದ್ಧೆಯೊಬ್ಬರು ತನ್ನ ಆಭರಣವನ್ನು ಕಳೆದುಕೊಂಡಿರುವ ಘಟನೆ ಜಿಲ್ಲೆಯ ಯಳಂದೂರಿನಲ್ಲಿ ನಡೆದಿದೆ.

ಯಳಂದೂರು ತಾಲೂಕು ಗುಂಬಳ್ಳಿ ಗ್ರಾಮದ ಜಯಮ್ಮಣ್ಣಿ (70) ಮೋಸ ಹೋದ ವೃದ್ಧೆ. ಯಾಮಾರಿಸಿದ ಕಳ್ಳ ಆಕೆಯ ಬಳಿಯಿದ್ದ 4 ಚಿನ್ನದ ಬಳೆ, 35 ಗ್ರಾಂ ತೂಕದ ಸರವನ್ನು ಎಗರಿಸಿದ್ದಾನೆ. ಖತರ್ನಾಕ್ ಕಳ್ಳನ ನಾಟಕಕ್ಕೆ ವೃದ್ಧೆ ಲಕ್ಷಾಂತರ ರೂ. ಮೌಲ್ಯದ ಬಂಗಾರ ಕಳೆದುಕೊಂಡಿದ್ದಾರೆ.

gold-theft-in-cinema-style
ಚಿನ್ನ ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋದ ವೃದ್ಧೆ

ಘಟನೆಯ ವಿವರ: ಜಯಮ್ಮಣಿ ಯಳಂದೂರಿನ ಎಂಡಿಸಿಸಿ ಬ್ಯಾಂಕ್​​ಗೆ ತೆರಳುತ್ತಿದ್ದಾಗ ಅಪರಿಚಿತ ಮಹಿಳೆಯೋರ್ವಳು ಅವರೊಂದಿಗೆ ಜೊತೆಯಾಗಿದ್ದಾಳೆ. ಜೋರಾಗಿ ಮಳೆ ಬರುತ್ತಿದ್ದರಿಂದ ಸ್ವಲ್ಪ ಹೊತ್ತು ನಿಂತು ಹೊರಡೋಣ ಬನ್ನಿ ಎಂದು ಆ ಮಹಿಳೆ ವೃದ್ಧೆಗೆ ಹೇಳುತ್ತಾಳೆ. ಹಾಗೆ ಇಬ್ಬರು ದಾರಿಬದಿ ಇದ್ದ ಮನೆ ಮುಂದೆ ಕುಳಿತಿದ್ದರು. ಈ ವೇಳೆ ವ್ಯಕ್ತಿವೊಬ್ಬ ಬಂದು ನನ್ನ ಪರ್ಸ್ ಕಳವಾಗಿದೆ, ನಿಮಗೇನಾದರು ಸಿಕ್ಕಿದೆಯಾ ಎಂದು ಕೇಳುತ್ತಾನೆ. ಆಗ ಇಬ್ಬರೂ ಸಿಕ್ಕಿಲ್ಲ ಎನ್ನುತ್ತಾರೆ.

ನಿಮ್ಮ ಮಾಂಗಲ್ಯ ಮುಟ್ಟಿ ಪ್ರಮಾಣ ಮಾಡಿ ಎಂದು ವೃದ್ಧೆಯೊಂದಿಗೆ ಬಂದಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿ ಹೇಳುತ್ತಾನೆ. ಆಕೆ ಮಾಂಗಲ್ಯ ಬಿಚ್ಚಿ ಪೇಪರ್​​ನಲ್ಲಿ ಸುತ್ತಿ ಪರ್ಸ್ ಸಿಕ್ಕಿಲ್ಲವೆಂದು ಪ್ರಮಾಣ ಮಾಡುತ್ತಾಳೆ. ಬಳಿಕ, ವೃದ್ಧೆಯನ್ನೂ ಪ್ರಮಾಣ ಮಾಡಿ ಎಂದಾಗ ಬಳೆ, ಸರ ಬಿಚ್ಚಿ ಪೇಪರ್​ನಲ್ಲಿ ಸುತ್ತಿ ಪ್ರಮಾಣ ಮಾಡುತ್ತಾಳೆ. ಈ ವೇಳೆ, ಸೀರೆ ಸೆರಗಿಗೆ ಆಭರಣದ ಪೊಟ್ಟಣ ಕಟ್ಟುತ್ತೇನೆಂದು ಹೇಳಿ ಬರೀ ಕಾಗದ ಕಟ್ಟಿ ಇಬ್ಬರೂ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಆಣೆ-ಪ್ರಮಾಣದ ನಾಟಕಕ್ಕೆ ವೃದ್ಧೆಯ ಲಕ್ಷಾಂತರ ರೂ. ಮೌಲ್ಯದ ಬಂಗಾರ ಮಾಯವಾಗಿದ್ದು, ಯಾಮಾರಿದ ವೃದ್ಧೆ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

Intro:ಪರ್ಸ್ ಕಳವು ನಾಟಕದಲ್ಲಿ ವೃದ್ಧೆಯ ಸರ-ಬಳೆ ಮಾಯ: ಕೊಟ್ಟು ಕೋಡಂಗಿ ಆದ ಅಜ್ಜಿ!

ಚಾಮರಾಜನಗರ: ಕೊಟ್ಟವ ಕೋಡಂಗಿ ಇಸ್ಕೊಂಡವ ವೀರಭದ್ರ ಎಂಬ ಗಾದೆ ಮಾತಿನಂತೆ ವೃದ್ಧೆಯೊಬ್ಬರು ಬಳೆ- ಸರವನ್ನು ಕಳೆದುಕೊಂಡಿರುವ ಘಟನೆ ಯಳಂದೂರಿನಲ್ಲಿ ನಡೆದಿದೆ.

Body:ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಜಯಮ್ಮಣ್ಣಿ ಎಂಬ ೭೦ ವರ್ಷದ ವೃದ್ಧೆ ೪ ಚಿನ್ನದ ಬಳೆ, ೩೫ ಗ್ರಾಂ ಸರವನ್ನು ಕಳೆದುಕೊಂಡವರು. ಯಳಂದೂರಿನ ಎಂಡಿಸಿಸಿ ಬ್ಯಾಂಕ್ ಗೆ ಚೆಕ್ ಹಾಕಲು ತೆರಳುತ್ತಿದ್ದಾಗ ಖತರ್ನಾಕ್ ಕಳ್ಳರ ನಾಟಕಕ್ಕೆ ಲಕ್ಷಾಂತರ ರೂ. ಮೌಲ್ಯದ ಬಂಗಾರ ಕಳೆದುಕೊಂಡಿದ್ದಾರೆ.

ಬ್ಯಾಂಕ್ ಗೆ ಚೆಕ್ ಹಾಕಲು ಜಯಮ್ಮಣ್ಣಿ ತೆರಳುತ್ತಿದ್ದಾಗ
ಅಪರಿಚಿತ ಮಹಿಳೆಯೋರ್ವಳು ಜಯಮ್ಮಣ್ಣಿ ಅವರೊಂದಿಗೆ ಜೊತೆಯಾಗುತ್ತಾಳೆ. ಮಳೆ ಬರುತ್ತಿದ್ದರಿಂದ ನಿಂತು ಹೊರಡೋಣ ಬನ್ನಿ ಎಂದು
ದಾರಿಬದಿ ಇದ್ದ ಮನೆ ಮುಂದೆ ಕುಳಿತಿದ್ದ ವೇಳೆ ವ್ಯಕ್ತಿವೋರ್ವ ಬಂದು ತನ್ನ ಪರ್ಸ್ ಕಳುವಾಗಿದೆ ಸಿಕ್ಕಿದೆಯಾ ಎಂದು ಕೇಳಿದಾಗ ಇಬ್ಬರೂ ಸಿಕ್ಕಿಲ್ಲ ಎನ್ನುತ್ತಾರೆ.

ನಿಮ್ಮ ಮಾಂಗಲ್ಯ ಮುಟ್ಟಿ ಪ್ರಮಾಣ ಮಾಡಿ ವೃದ್ಧೆಯ ಸಂಗಡ ಬಂದಿದ್ದ ಮಹಿಳೆಗೆ ಅಪರಿಚಿತ ಹೇಳಿದಾಗ ಆಕೆ ಮಾಂಗಲ್ಯ ಬಿಚ್ಚಿ ಪೇಪರ್ ನೊಳಕ್ಕೆ ಸುತ್ತಿ ಪರ್ಸ್ ಸಿಕ್ಕಿಲ್ಲವೆಂದು ಪ್ರಮಾಣ ಮಾಡುತ್ತಾಳೆ. ಬಳಿಕ, ವೃದ್ಧೆಯನ್ನೂ ಪ್ರಮಾಣ ಮಾಡಿ ಎಂದಾಗ ಬಳೆ, ಸರ ಬಿಚ್ಚಿ ಪೇಪರ್ ನಲ್ಲಿ ಸುತ್ತಿ ಪ್ರಮಾಣ ಮಾಡುತ್ತಾರೆ. ಈ ವೇಳೆ, ಸೀರೆ ಸೆರಗಿಗೆ ಆಭರಣದ ಪೊಟ್ಟಣ ಕಟ್ಟುತ್ತೇನೆಂದು ಹೇಳಿ ಬರೀ ಕಾಗದ ಕಟ್ಟಿ ಇಬ್ಬರೂ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Conclusion:ಆಣೆ-ಪ್ರಮಾಣದ ನಾಟಕಕ್ಕೆ ವೃದ್ದೆಯ ಲಕ್ಷಾಂತರ ರೂ. ಬಂಗಾರ ಮಾಯವಾಗಿದ್ದು, ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.