ETV Bharat / jagte-raho

ಡೇಂಟಿಂಗ್​ ಆ್ಯಪ್ ಮೂಲಕ ಸುಂದರಿ ಬಲೆಗೆ ಬಿದ್ದು ಹಣ ಕಳೆದುಕೊಂಡ ಯುವಕ! - ಓಕೆ ಕುಪಿಡ್​ ಡೇಟಿಂಗ್​ ಆ್ಯಪ್​​

ಏಕಾಂಗಿ ಜೀವನ ಸಾಕಾಕಿ ಡೇಟಿಂಗ್​​ ಆ್ಯಪ್​ ಮೂಲಕ ಯುವತಿಯನ್ನ ಪರಿಚಯಿಸಿಕೊಂಡ ಯುವಕ, ಆಕೆಯ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದು, ಸಹಾಯಕ್ಕಾಗಿ ಸೈಬರ್​ ಕ್ರೈಮ್​ ಪೊಲೀಸರ ಮೊರೆ ಹೋಗಿದ್ದಾನೆ.

girl-cheated-man-from-dating-app
ಡೇಂಟಿಂಗ್​ ಆ್ಯಪ್
author img

By

Published : Jul 13, 2020, 8:44 PM IST

ಬೆಂಗಳೂರು: ಮಹಿಳೆಯ ಜತೆ ಏಕಾಂತದಲ್ಲಿ ಕಾಲ ಕಳೆಯಲು ಯೋಚಿಸಿ ಡೇಟಿಂಗ್ ಆ್ಯಪ್ ಮೊರೆ ಹೋಗಿದ್ದ ಯುವಕ, ಯುವತಿಯ ಮೋಸದ ಬಲೆಗೆ ಬಿದ್ದು ಪರಡಾಡಿರುವ ಘಟನೆ ನಗರದಲ್ಲಿ ನಡೆದಿದೆ.

ವೈಟ್ ಫೀಲ್ಡ್ ವಿಭಾಗದ ದೊಡ್ಡನೆಕ್ಕುಂದಿ 26 ವರ್ಷದ ಯುವಕ, ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಮಹಿಳೆಯ ಜೊತೆ ಕಾಲ ಕಳೆಯಲು 'ಓಕೆ ಕೂಪಿಡ್' (OK Cupid) ಎಂಬ ಡೇಟಿಂಗ್ ಆ್ಯಪ್​ನಲ್ಲಿ ಯುವತಿಗಾಗಿ ಹುಡುಕಾಡಿದ್ದಾನೆ. ಈ ವೇಳೆ ಆ್ಯಪ್ ಮೂಲಕ ಮಹಿಳೆಯೊಬ್ಬರು ಸಂಪರ್ಕವಾಗಿ ನಂತರ ಇಬ್ಬರು ಪರಸ್ಪರ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.

2-3 ದಿನಗಳವರೆಗೆ ವ್ಯಾಟ್ಸ್ಆ್ಯಪ್​​ನಲ್ಲಿ ಚ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ ಯುವಕ ತನ್ನ ಭಾವನೆಯನ್ನು ಮಹಿಳೆಯ ಮುಂದೆ ಹೇಳಿಕೊಂಡಿದ್ದ. ಬಳಿಕ ಆಕೆಯ ಜತೆ ವ್ಯಾಟ್ಸ್ಆ್ಯಪ್​ನಲ್ಲಿ ನಗ್ನವಾಗಿ ವಿಡಿಯೋ ಸಂಭಾಷಣೆ ನಡೆಸಿದ್ದ. ಇದೇ ವೇಳೆ ಆಕೆ, ಯುವಕನ ಅರಿವಿಗೆ ಬಾರದಂತೆ ಎಲ್ಲವನ್ನೂ ಸಂಗ್ರಹಿಸಿದ್ದಳು.

ನಂತರ ಹಣಕ್ಕಾಗಿ ಯುವಕನಿಗೆ ಬ್ಲಾಕ್​ಮೇಲ್​ ಮಾಡತೊಡಗಿದ್ದಾಳೆ. ಮಾನಕ್ಕೆ ಹೆದರಿದ ಯುವಕ ಮೊದಲು ಗೂಗಲ್ ಪೇ‌‌ ಮೂಲಕ ಹಣ ಕೊಟ್ಟಿದ್ದ. ಹಣ ಪಡೆದುಕೊಂಡ ಅಪರಿಚಿತ ಮಹಿಳೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.

ಇದಕ್ಕೆ ಒಪ್ಪದೇ ಇದ್ದಾಗ ಯುವಕನಿಗೆ ಕರೆ ಮಾಡಿ ರೆಕಾರ್ಡ್ ಮಾಡಿಕೊಂಡಿರುವ ಖಾಸಗಿ ದೃಶ್ಯಗಳನ್ನು ಯೂಟ್ಯೂಬ್, ಫೇಸ್​ಬುಕ್ ಮತ್ತು ಇನ್ಸ್​ಟಾಗ್ರಾಂನಲ್ಲಿ ಹರಿಬಿಡುವುದಾಗಿ ಬ್ಲಾಕ್​ಮೇಲ್​ ಮಾಡಿದ್ದಾಳೆ. ಹೆದರಿದ ಯುವಕ 16 ಸಾವಿರ ರೂ. ಮತ್ತೊಮ್ಮೆ ಆಕೆಗೆ ನೀಡಿದ್ದಾನೆ.

ಇದಾದ ಬಳಿಕವೂ ಮಹಿಳೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಕಾರಣ, ಸಂತ್ರಸ್ತ ಯುವಕ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವೈಟ್ ಫೀಲ್ಡ್ ವಿಭಾಗದ ಪೊಲೀಸರು ತನಿಖೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.