ETV Bharat / jagte-raho

2005ರ ಬಿಜೆಪಿ ಮುಖಂಡನ ಹತ್ಯೆ ಕೇಸ್​: ಗ್ಯಾಂಗ್​ಸ್ಟರ್​ ರಾಕೇಶ್ ಪಾಂಡೆ ಎನ್​ಕೌಂಟರ್

2005 ರ ನವೆಂಬರ್​​ 29 ರಂದು ಮೊಹಮ್ಮದಾಬಾದ್ ಕ್ಷೇತ್ರದ ಶಾಸಕ ಕೃಷ್ಣಾನಂದ ರೈ ಸೇರಿದಂತೆ ಏಳು ಮಂದಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಎನ್​ಕೌಂಟರ್​ನಲ್ಲಿ ಹತ್ಯೆಗೈದಿದೆ.

Gangster killed in encounter in Uttar Pradesh
ಗ್ಯಾಂಗ್​ಸ್ಟರ್​ ರಾಕೇಶ್ ಪಾಂಡೆ ಎನ್​ಕೌಂಟರ್
author img

By

Published : Aug 9, 2020, 11:04 AM IST

Updated : Aug 9, 2020, 11:16 AM IST

ಲಖನೌ: ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಇಂದು ನಡೆಸಿದ ಎನ್​ಕೌಂಟರ್​ನಲ್ಲಿ 2005 ರ ಬಿಜೆಪಿ ನಾಯಕ ಕೃಷ್ಣಾನಂದ ರೈ​ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್​ಸ್ಟರ್ ರಾಕೇಶ್ ಪಾಂಡೆಯನ್ನು ಬೇಟೆಯಾಡಲಾಗಿದೆ.

ಅನೇಕ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದ ಮೌ ಜಿಲ್ಲೆಯ ನಿವಾಸಿ ಪಾಂಡೆ ಅಲಿಯಾಸ್ ಹನುಮಾನ್ ಪಾಂಡೆಗಾಗಿ ಯುಪಿ ಪೊಲೀಸರು ಅನೇಕ ವರ್ಷಗಳಿಂದ ಹುಡುಕುತ್ತಿದ್ದರು. ಈತನ ಬಗ್ಗೆ ಸುಳಿವು ಕೊಟ್ಟವವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.

2005 ರ ನವಂಬರ್​​ 29 ರಂದು ಮೊಹಮ್ಮದಾಬಾದ್ ಕ್ಷೇತ್ರದ ಶಾಸಕ ಕೃಷ್ಣಾನಂದ ರೈ ಸೇರಿದಂತೆ ಏಳು ಮಂದಿಯ ಕೊಲೆ ಪ್ರಕರಣದ ಆರೋಪ ಹನುಮಾನ್ ಪಾಂಡೆ ಮೇಲಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

ಲಖನೌದ ಸರೋಜಿನಿ ನಗರ ಪೊಲೀಸ್ ಠಾಣೆ ಬಳಿ ಇಂದು ನಡೆಸಿದ ಎನ್​ಕೌಂಟರ್​ನಲ್ಲಿ ಪಾಂಡೆ ಮೃತಪಟ್ಟಿದ್ದಾನೆ ಎಂದು ಎಸ್‌ಟಿಎಫ್​ನ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ತಿಳಿಸಿದ್ದಾರೆ.

Last Updated : Aug 9, 2020, 11:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.