ಬೆಂಗಳೂರು: ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ಲೊಟ್ಟೆಗೊಲ್ಲಹಳ್ಳಿ ಬಡಾವಣೆಯಲ್ಲಿ 19 ವರ್ಷದ ಸ್ನೇಹಿತೆಯೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಖಿಲ್ (19), ಅಭಿನವ್ (19) ಅತ್ಯಾಚಾರ ಎಸಗಿದ ಆರೋಪಿಗಳು. ಜ.15ರಂದು ಕೋರಮಂಗಲ ಬಡಾವಣೆಯ ಇಂಡಿಗೋ ಪಬ್ನಲ್ಲಿ ಯುವತಿಯ ಸ್ನೇಹಿತ ನಿಖಿಲ್ ಹಾಗೂ ಆತನ ಸ್ನೇಹಿತರಾದ ಅಭಿನವ್ ಮತ್ತು ಶರತ್ ಮದ್ಯಪಾನ ಮಾಡಿದ್ದರು.

ಅದೇ ಅಮಲಿನಲ್ಲಿದ್ದ ನಾನು ನನ್ನ ಪಿಜಿಗೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ನಿಖಿಲ್ ಲೊಟ್ಟೆಗೊಲ್ಲಹಳ್ಳಿಯ ದೇವಿನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋದ. ಕೋಣೆಯೊಂದರಲ್ಲಿ ಮಲಗಲು ಹೇಳಿ ಹೋದ. ಸ್ವಲ್ಪ ಸಮಯದ ನಂತರ ನನ್ನ ಪಕ್ಕದಲ್ಲಿ ಮಲಗಿ ಬಲವಂತವಾಗಿ ನಿಖಿಲ್ ಅತ್ಯಾಚಾರ ಎಸಗಿದ್ದಾನೆ. ಮತ್ತೆ ಆತನ ಸ್ನೇಹಿತರು ಅತ್ಯಾಚಾರ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಯುವತಿ ದೂರಿದ್ದಾಳೆ.
ಬೆಳಿಗ್ಗೆ 8.40ರ ಸುಮಾರಿಗೆ ಎಚ್ಚರಗೊಂಡಾಗ ಅಭಿನವ್ ನನ್ನ ಪಕ್ಕದಲ್ಲಿದ್ದ. ಮದ್ಯದಲ್ಲಿ ಪ್ರಜ್ಞೆ ತಪ್ಪಿಸುವ ಅಂಶವನ್ನು ಬೆರೆಸಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಯುವತಿ ದೂರಿನಲ್ಲಿ ಒತ್ತಾಯಿಸಿದ್ದಾಳೆ.